ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಯೋಧನ ಆರ್ಮಿ ಕಾರ್ಡ್, ಮರಳಿ ನೀಡಿದ್ರೆ 10 ಸಾವಿರ ಪುರಸ್ಕಾರ

ಕುಂದಗೋಳ : ರಜೆಯ ಮೇಲೆ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ಯೋಧನೊಬ್ಬ ಜ.11 ರಂದು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ದರ್ಶನಕ್ಕೆ ತೆರಳಿದ್ದಾಗ ತನ್ನ ಆರ್ಮಿ ಕಾರ್ಡ್ (ಯೋಧರ ಗುರುತಿನ ಚೀಟಿ) ಕಳೆದುಕೊಂಡು ಪೇಚಿಗೆ ಸಿಲುಕಿದ್ದಾನೆ.

ಗುಜರಾತಿನ ಮರಾಠಾ ಎಲಿಮೇಂಟ್ರಿ 18 ಬೆಟಾಲಿಯನ್ ಒಳಗೆ ಕಂಪ್ಯೂಟರ್ ಆಪರೇಟರ್ ಹುದ್ದೆ ನಿರ್ವಹಿಸುತ್ತಿರುವ

ಶಂಭುಲಿಂಗಪ್ಪ ಕೆ ಕಲ್ಲದೇವರ ಎಂಬುವವರೇ ತಮ್ಮ ಆರ್ಮಿ ಕಾರ್ಡ್ ಕಳೆದುಕೊಂಡವರು.

ಹಾವೇರಿ ಜಿಲ್ಲೆ ಹಳೇರತ್ತಿ ಗ್ರಾಮದ ಇವರು ತಮ್ಮ ಸಂಬಂಧಿಕರ ಮನೆಗೆ ಬಂದು ಅಲ್ಲಿಂದ ಹುಬ್ಬಳ್ಳಿ ಸಿದ್ಧಾರೂಢರ ಮಠಕ್ಕೆ ತೆರಳುವಾಗ ತಮ್ಮ ಆರ್ಮಿ ಕಾರ್ಡ್ ಕಳೆದುಕೊಂಡಿದ್ದಾರೆ. ಈಗಾಗಲೇ ಸ್ನೇಹಿತ ಪೊಲೀಸರ್ ಸಹಾಯ ಹಾಗೂ ಹಲವಾರು ಸಿಸಿ ಕ್ಯಾಮರಾ ತಡಕಾಡಿದರು ಕಳೆದುಹೋದ ಆರ್ಮಿ ಕಾರ್ಡ್ ಮರಳಿ ಸಿಕ್ಕಿಲ್ಲ ಯಾರಿಗಾದರೂ ಈ ಕಾರ್ಡ್ ಸಿಕ್ಕಲ್ಲಿ ಮರಳಿ ನೀಡಿದ್ರೆ ಯೋಧ ಪ್ರೀತಿ ಕಾಣಿಕೆಯಾಗಿ 10 ಸಾವಿರ ರೂಪಾಯಿ ಪುರಸ್ಕಾರ ನೀಡಲಿದ್ದಾರೆ.

ಜ.11 ನಂತರದ ದಿನಗಳಲ್ಲಿ ಯಾರಿಗಾದರೂ ಈ ಶಂಭುಲಿಂಗಪ್ಪ ಕೆ ಕಲ್ಲದೇವರ ಎಂಬುವವರ ಆರ್ಮಿ ಕಾರ್ಡ್ ಸಿಕ್ಕಿದಲ್ಲಿ ಈ ನಂಬರಿಗೆ ಸಂಪರ್ಕ ಮಾಡಲು 8050457426 ಅಥವಾ 9113999157 ಯೋಧ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

15/02/2021 06:15 pm

Cinque Terre

26.49 K

Cinque Terre

4

ಸಂಬಂಧಿತ ಸುದ್ದಿ