ಹುಬ್ಬಳ್ಳಿ- ಫ್ಯಾಷನ್ ಸ್ಕೌಟ್ ದಲ್ಲಿ ಹುಬ್ಬಳ್ಳಿ ಯುವತಿಯೊಬ್ಬಳು ಲಂಡನನಲ್ಲಿ ನಡೆದ 2020 ಪ್ಯಾಷನ್ ಲಂಡನ್ ಫ್ಯಾಷನ್ ಸ್ಕೌಟ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ, ತಮ್ಮ ಫ್ಯಾಷನ್ ಡಿಸೈನ್ ಪ್ರದರ್ಶನ ನೀಡಿ ದೇಶದ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾಳೆ..
ಐ.ಎನ್.ಐ.ಎಫ್.ಡಿ ಫ್ಯಾಷನ್ ಸ್ಕೂಲ್ ವಿದ್ಯಾರ್ಥಿನಿ ಚೈತ್ರಾ ಕಲ್ಯಾಣ ಶೆಟ್ಟರ್. ಲಂಡನನಲ್ಲಿ ನಡೆದ 2020 ಫ್ಯಾಷನ್ ಲಂಡನ್ ಫ್ಯಾಷನ್ ಸ್ಕೌಟನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ, ತಮ್ಮ ಫ್ಯಾಷನ್ ಡಿಸೈನ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾಳೆ. ಭಾರತೀಯ ಫ್ಯಾಷನ್ ಡಿಸೈನ್ಯ ವಿದೇಶಿಯ ಮಟ್ಟದಲ್ಲಿ ಪರಿಚಯಿಸಿದ್ದಾರೆ.
ಅವರು ಗ್ಲೋ ಇನ್ ದಿ ಡಾರ್ಕ ನಕ್ಷತ್ರ ಪುಂಜದ ಬಣ್ಣಗಳ ಡಿಜಿಟಲ್ ಮುದ್ರಣ ತಂತ್ರವನ್ನು ಬಳಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ.ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾದರಿಗಳ ಅನ್ವಯವಾಗಿ ಫಾರ್ಮ್ ಟು ಫ್ಯಾಬ್ರಿಕ್ಸ್, ಫ್ಯಾಬ್ರಿಕ್ ಟು ಫ್ಯಾಷನ್, ಫ್ಯಾಷನ್ ಟು ಫಾರಿನ ಸೂತ್ರದಿಂದ ಲಂಡನನಲ್ಲಿ ನಡೆದ ಫ್ಯಾಷನ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ದೇಶಿಯ ವಿನ್ಯಾಸಗಳನ್ನು ಪ್ರದರ್ಶನ ಮಾಡಿ ಪ್ರಶಸ್ತಿ ಬಾಚಿಕೊಂಡಿದ್ದಾಳೆ.
ಪ್ರಸ್ತುತವಾಗಿ ಫ್ಯಾಷನ್ ಡಿಸೈನ್ ತುಂಬಾ ಪ್ರಭಾವಿತದಲ್ಲಿದ್ದು, ಯುವ ಸಮುದಾಯಕ್ಕೆ ಫ್ಯಾಷನ್ ಡಿಸೈನ್ ಒಂದು ಆಕರ ಈ ಹಿನ್ನೆಲೆಯಲ್ಲಿ, ಚೈತ್ರಾ ಕಲ್ಯಾಣ ಶೆಟ್ಟರ್ ಡಿಜಿಟಲ್ ಹೂವಿನ ಮುದ್ರಿತಗಳು, ಕಸೂತಿ ಕಲೆ, ಸೂಜಿ ಕ್ರಾಫ್ಟ್, ಬ್ರೊಕೇಡ್, ಸಿಂಥೆಟಿಕ್ ಬೇಸ್ ಫ್ಯಾಬ್ರಿಕಗಳಂತ ವಿನ್ಯಾಸಗಳಿಂದ ದೇಶಿಯ ಕಲೆಯನ್ನು ವಿದೇಶಿಯ ಮಟ್ಟದಲ್ಲಿ ಪ್ರದರ್ಶಿಸಿದ್ದು, ವಿನೂತನವಾಗಿ ಡಿಸೈನ್ಯ ಮಾಡಿದ ಚೈತ್ರಾ ಅವರಿಗೆ ಲಂಡನಲ್ಲಿರುವ ವಿಶಾಖ ಯದುವಂಶಿ ಅವರು ಇವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿಯ ಪ್ರತಿಭೆ ಯೊಂದು ಫ್ಯಾಷನ್ ಡಿಸೈನ್ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ.....!
Kshetra Samachara
03/02/2021 07:25 pm