ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:ವೆಸ್ಟ್ ಬಾಟಲಿ ಮೂಲಕ ಬೀದಿ ನಾಯಿಗಳಿಗೆ ಆಹಾರ: ರಾಯ್ ಸ್ಟಿಯನ್ ಯುವ ಪಡೆಯ ವಿನೂತನ ಕಾರ್ಯ

ಹುಬ್ಬಳ್ಳಿ: ಅವರೆಲ್ಲ ವಾಣಿಜ್ಯನಗರಿಯ ಯುವ ಉತ್ಸಾಹಿಗಳು.ಇಷ್ಟುದಿನ ಪ್ರಾಣಿ ಸಂರಕ್ಷಣೆ ಕುರಿತು ಹಲವಾರು ಜಾಗೃತಿ ಅಭಿಯಾನವನ್ನು ಮಾಡಿದ್ದರೂ. ಆದ್ರೇ ಈಗ ವಿನೂತನ ಪ್ರಯೋಗವೊಂದನ್ನು ಮಾಡುವ ಮೂಲಕ ಹುಬ್ಬಳ್ಳಿ ಮಾತ್ರವಲ್ಲದೆ ರಾಜ್ಯದ ಜನರ ಹುಬ್ಬೇರುವಂತೆ ಮಾಡಿದ್ದಾರೆ.ಅಷ್ಟಕ್ಕೂ ಯಾವುದು ಆ ಯುವ ಪಡೆ..? ಅವರು ಮಾಡಿದ್ದಾದ್ರೂ ಏನು ಅಂತೀರಾ ಈ ಸ್ಟೋರಿ ನೋಡಿ..

ವಾಣಿಜ್ಯನಗರಿ ಹುಬ್ಬಳ್ಳಿಯ ರಾಯ್ ಸ್ಟೀಯನ್ ಯುವ ಉತ್ಸಾಹಿಗಳ ತಂಡ ಪ್ರಾಣಿಗಳ ಸಂರಕ್ಷಣೆ ಕುರಿತು ಹತ್ತು ಹಲವು ಅಭಿಯಾನ ಮಾಡಿದ್ದು,ಈಗ ಹೊಸ ತಂತ್ರಜ್ಞಾನದ ಮಷಿನ್ ಒಂದನ್ನು ಕಂಡು ಹಿಡಿದಿದ್ದು, ಇದರಲ್ಲಿ ವೆಸ್ಟ್ ವಾಟರ್ ಬಾಟಲ್ ಹಾಕಿದ್ರೇ ಸಾಕು ಬೀದಿ ನಾಯಿಗಳಿಗೆ ಆಹಾರ ದೊರೆಯುತ್ತದೆ.ಹಸಿದ ನಾಯಿಗಳು ಹಲವಾರು ಅವಾಂತರ ಸೃಷ್ಟಿಸುತ್ತವೆ.ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರಕ್ಕಾಗಿ ಈ ಮಷೀನ್ ಅನ್ನು ಕಂಡು ಹಿಡಿದಿದ್ದು,ಬಾಟಲ್ ಹಾಕಿದರೇ ಅದರಿಂದ ರಿಸೈಕಲ್ ಆಗಿ ನಾಯಿಗಳಿಗೆ ಆಹಾರ ದೊರೆಯುತ್ತದೆ.ಇದರಿಂದ ನಾಯಿಗಳ ಹಸಿವಿನಿಂದ ಬಳಲುವುದು ಹಾಗೂ ಹಸಿವಿನಿಂದ ಬೇರೆ ಯಾರ ಮೇಲೆಯೂ ಯಾವುದೇ ರೀತಿಯಲ್ಲಿ ಹಲ್ಲೆ ಮಾಡುವುದು ಹಾನಿ ಮಾಡುವುದಿಲ್ಲ.

ಸಿನಿಮಾ ನಟ ಸೋನು ಸೂದ್ ಹಾಗೂ ರತನ್ ಟಾಟಾ ಅವರ ಪ್ರೇರಣೆಯಿಂದ ಈ ಉತ್ಸಾಹಿ ಯುವ ತಂಡ ಇಂತಹದೊಂದು ಕಾರ್ಯಕ್ಕೆ ಕೈ ಹಾಕಿದ್ದು,ಇದರಲ್ಲಿ ಸಿಸಿಟಿವಿಯನ್ನು ಕೂಡ ಹಾಕಲಾಗಿದ್ದು,ರಕ್ಷಣೆ ಜೊತೆಗೆ ಪ್ರಾಣಿಗಳಿಗೆ ಆಹಾರವನ್ನು ಒದಗಿಸುತ್ತವೆ. ಅಲ್ಲದೇ ಎಲ್ಲೆಂದರಲ್ಲಿ ಕುಡಿದು ಬಿಸಾಡುವ ತ್ಯಾಜ್ಯ ವಾಟರ್ ಬಾಟಲಿಯಿಂದ ಪರಿಸರಕ್ಕೆ ಹಾನಿಯಾಗುತ್ತದೆ.ಈ ನಿಟ್ಟಿನಲ್ಲಿ ಬಾಟಲ್ ಈ ಮಷೀನ್ ಒಳಗೆ ಹಾಕುವುದರಿಂದ ನಾಯಿಗಳಿಗೆ ಹಾಗೂ ಬೀದಿ ಪ್ರಾಣಿಗಳನ್ನು ಸಂರಕ್ಷಣೆ ಮಾಡಿದಂತಾಗುತ್ತದೆ.

ರಾಯ್‌ಸ್ಟಿಯನ್ ಫೌಂಡೇಶನ್ ರಾಯ್‌ಸ್ಟಿಯನ್ ತಯಾರಕರ ಸಹಯೋಗದೊಂದಿಗೆ ಹುಬ್ಬಳ್ಳಿನಗರದಿಂದ

ಪ್ರಾರಂಭವಾಗುತ್ತಿದ್ದು,ಆರಂಭದಲ್ಲಿ 50 ಯಂತ್ರಗಳನ್ನು ನಿಯೋಜಿಸುವ ಮೂಲಕ ಸ್ಥಳೀಯ ತಂಡಗಳ ಸಹಾಯದಿಂದ ಭಾರತದ 15 ರಾಜ್ಯಗಳಲ್ಲಿ 750 ಯಂತ್ರಗಳನ್ನು ನಿಯೋಜಿಸುವ ಕನಸನ್ನು ಕಟ್ಟಿಕೊಂಡಿದೆ.

ಪ್ರತಿಯೊಂದು ಜೀವಿಗೂ ಬದುಕುವ ಸಮಾನ ಹಕ್ಕುಗಳಿವೆ ಎಂಬುವುದನ್ನು ಪ್ರಸ್ತುತ ಪಡಿಸುತ್ತಿರುವ ಯುವ ಉತ್ಸಾಹಿಗಳ ಕಾರ್ಯಕ್ಕೆ ನಮ್ಮದೊಂದು ಸಲಾಂ...

Edited By : Manjunath H D
Kshetra Samachara

Kshetra Samachara

03/02/2021 10:30 am

Cinque Terre

50.32 K

Cinque Terre

26

ಸಂಬಂಧಿತ ಸುದ್ದಿ