ಹುಬ್ಬಳ್ಳಿ: ಅವರೆಲ್ಲ ವಾಣಿಜ್ಯನಗರಿ ಹುಬ್ಬಳ್ಳಿಯ ಹಳೆಯ ವಿದ್ಯಾರ್ಥಿಗಳು. ಹುಬ್ಬಳ್ಳಿ-ಧಾರವಾಡ ಮಹಾನಗರದ ವಾಯುಮಾಲಿನ್ಯದಿಂದ ಬೇಸತ್ತು ಹೋಗಿದ್ದ ಅವರು ಈಗ ವಿನೂತನ ಪ್ರಯೋಗವೊಂದನ್ನು ಕೈಗೆತ್ತಿಕೊಂಡಿದ್ದಾರೆ.ತಮ್ಮ ಈ ಒಂದು ಪ್ರಯೋಗದ ಮೂಲಕ ಸಾರ್ವಜನಿಕರಿಗೆ ಒಳ್ಳೆಯದಾಗಲಿ ಎಂದು ಕೊಡುಗೆಯೊಂದನ್ನು ನೀಡಿದ್ದಾರೆ.ಅಷ್ಟಕ್ಕೂ ಯಾರು ಆ ವಿದ್ಯಾರ್ಥಿಗಳು ಅವರು ನೀಡಿರುವ ಕೊಡುಗೆ ಆದ್ರೂ ಏನು ಅಂತೀರಾ ತೋರಸ್ತೀವಿ ನೋಡಿ...
ಕಸದಿಂದ ರಸ ಯೋಜನೆ ಅಡಿಯಲ್ಲಿ ಇಲ್ಲಿಯ ಕಾರವಾರ ರಸ್ತೆ ಗ್ರಿಡ್ ನ ಸದ್ಗುರು ಸಿದ್ಧಾರೂಡ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಜೈನ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ವತಿಯಿಂದ ಶುದ್ಧವಾಯು ಟವರ್ (ಏರ್ ಪ್ಯೂರಿಪೈಯರ್)ತಯಾರಿಸಿ ದೇಣಿಗೆ ನೀಡಲಾಗಿದೆ. ವಾಯುಮಾಲಿನ್ಯದ ನಿಯಂತ್ರಣ ಮಾಡಲು ಇದು ನೆರವಾಗಲಿದ್ದು,ಪೊಲೀಸರು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪೊಲೀಸ್ ಠಾಣೆಗೆ ಯಂತ್ರ ಕೊಡಲಾಗಿದೆ.ಧೂಳು ಮುಕ್ತ ನಗರ ನಿರ್ಮಾಣಕ್ಕೆ ಇದನ್ನು ಬಳಿಸಿಕೊಳ್ಳಲು ಸಂಘದ ಪದಾಧಿಕಾರಿಗಳು ಕೋರಿದ್ದಾರೆ.ಇಷ್ಟು ದಿನ ಶಾಲೆಗಳಿಗೆ ಬಣ್ಣ ಬಳೆಯುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದ್ದ ಹಳೇಯ ವಿದ್ಯಾರ್ಥಿಗಳು ಈಗ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈ ಜೋಡಿಸಿದ್ದಾರೆ.
ಸದ್ಗುರು ಸಿದ್ಧಾರೂಡ ಹಳೆಯ ವಿದ್ಯಾರ್ಥಿಗಳ ಸಂಘ ಹುಬ್ಬಳ್ಳಿ ಹಾಗೂ ಜೈನ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿ ವಿನೂತನ ಪ್ರಯತ್ನದ ಮೂಲಕ ಶುದ್ಧವಾಯು ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ.
ಅಲ್ಲದೇ ಕಸದಲ್ಲಿಯೇ ರಸ ತೆಗೆದು ನಿರುಪಯುಕ್ತ ವಸ್ತುಗಳಿಂದ ಏರ್ ಪ್ಯೂರಿಪೈಯರ್ ಟವರ್ ನಿರ್ಮಾಣ ಮಾಡಲಾಗಿದೆ. ಒಟ್ಟು 09 ಸರ್ಕಾರಿ ಕನ್ನಡ ಶಾಲೆಗೆ ಬಣ್ಣ ಬಳೆಯುವ ಮೂಲಕ ಜನಮನ್ನಣೆ ಪಡೆದಿದ್ದ ಹಳೇಯ ವಿದ್ಯಾರ್ಥಿಗಳ ತಂಡ ಒಂದೊಂದು ಹಂತದಲ್ಲಿ ಮುನ್ನುಗ್ಗುತ್ತಿದ್ದು,ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ ಶಾಲೆ ಕಾಲೇಜು ಹಾಗೂ ಸಮಾಜ ಸುಧಾರಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಳೇಯ ವಿದ್ಯಾರ್ಥಿಗಳ ಕಾರ್ಯ ಕೂಡ ಮಹತ್ವವನ್ನು ಪಡೆದುಕೊಳ್ಳಲಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.ಎಷ್ಟೇ ಕೆಲಸದ ಒತ್ತಡವಿದ್ದರೂ ಕೂಡ ಎಲ್ಲವನ್ನೂ ಬದಿಗಿಟ್ಟು ಸಾಮಾಜಿಕ ಕಾರ್ಯ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳ ಸೇವೆ ನಿಜಕ್ಕೂ ಸ್ಮರಣೀಯ.
Kshetra Samachara
27/01/2021 07:13 pm