ಪಬ್ಲಿಕ್ ನೆಕ್ಸ್ಟ್ ವಿಶೇಷ:ಈರಣ್ಣ ವಾಲಿಕಾರ
ಹುಬ್ಬಳ್ಳಿ: ನಿರುದ್ಯೋಗಿ ಸ್ನೇಹಿತರ ಸಂಕಷ್ಟಗಳಿಗೆ ಮಿಡಿದ ಸ್ನೇಹಿತರಿಬ್ಬರು, ಅವರ ಜೀವನಕ್ಕೆ ಆಧಾರವಾಗಿ ನಿಲ್ಲಲು ಹೊಸ ಉದ್ಯಮಕ್ಕೆ ಕೈಹಾಕಿದ್ದಾರೆ. ಮಹಾನಾಯಕ ಹೆಸರಿನಲ್ಲಿ ಮೊಬೈಲ್ ಕ್ಯಾಂಟಿನ್‌ಗಳನ್ನು ಆರಂಭಿಸಿ ಸ್ನೇಹಿತರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ನೀಡುತ್ತಿದ್ದಾರೆ.....
ಹೀಗೆ ಯುವಕರ ತಂಡಯೊಂದು ಮಹಾನಾಯಕನ ಹೆಸರಲ್ಲಿ ಮೂಬೈಲ್ ಕ್ಯಾಂಟೀನ್ ಗಳನ್ನು ಇಟ್ಟುಕೊಂಡು, ಅದರಲ್ಲಿ ಮಹಿಳೆಯರಿಗೆ ಉದ್ಯೊಗ ನೀಡಿರುವ ಹೆಸರು ನಿರಂಜನ ಹೊಳೆಪ್ಪನವರ, ಸಂಜು ತಿರಕಣ್ಣವರ. ಕೇವಲ 10 ಹಾಗೂ 8 ನೇ ತರಗತಿ ಓದಿರುವ ಯುವಕರಿಬ್ಬರ ಕನಸು ಹಾಗೂ ಉದ್ದೇಶ ದೊಡ್ಡದಿದೆ.
ಕೆಲಸವಿಲ್ಲದ ಅಲೆಯುತ್ತಿದ್ದ ಸ್ನೇಹಿತರಿಗೆ ನೆರವಾಗಬೇಕು ಎನ್ನುವ ಕಾರಣದಿಂದ, ಎರಡು ತಿಂಗಳ ನಿರಂತರ ಪ್ರಯತ್ನದಿಂದ, ಮಹಾನಾಯಕ ಮೊಬೈಲ್ ಹೋಟೆಲ್‌ಗಳ ಕನಸು ಸಾಕಾರಗೊಂಡಿದೆ.
ನಗರದ ಕಿಮ್ಸ್ ಹಿಂಭಾಗ, ಕೋರ್ಟ್ ವೃತ್ತ , ಎಚ್ ಡಿಎಫ್ಸಿ ಬ್ಯಾಂಕ್ ಹತ್ತಿರ, ಹೊಸ ಕೋರ್ಟ್ ಬಳಿ ಆರಂಭವಾಗಿರುವ ಐದು ಕ್ಯಾಂಟೀನ್‌ಗಳಲ್ಲಿ ಸುಮಾರು 15 ಸ್ನೇಹಿತರು ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಕನಿಷ್ಟ 20 ಕ್ಯಾಂಟಿನ್ ಆರಂಭಿಸಿ ಸುಮಾರು 50 ಜನರಿಗಾದರೂ ಉದ್ಯೋಗ ಕಲ್ಪಿಸಬೇಕು ಎನ್ನುವ ಉದ್ದೇಶ ಇವರದ್ದಾಗಿದೆ...
ಕಳೆದ ಹತ್ತು ದಿನಗಳಿಂದ ಕ್ಯಾಂಟೀನ್ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಕೇವಲ 15 ರೂ. ಪಲಾವ ಕೊಡುತ್ತಿದ್ದು, ಸಧ್ಯಕ್ಕೆ ಪಲಾವ ಹಾಗೂ ಚಹಾ ಮಾತ್ರ ದೊರೆಯುತ್ತಿದೆ.
ದುಡಿಯುವ ಜನರಿಗೆ ಹೊಟ್ಟೆತುಂಬ ನೀಡಬೇಕು ಎನ್ನುವ ಕಾರಣಕ್ಕೆ ಪಲಾವ ಮಾತ್ರ ಲಭ್ಯವಿದ್ದು, ಉಳಿದ ಪಲವಾವನ್ನು ಅನಾಥ ಆಶ್ರಮಕ್ಕೆ ನೀಡುತ್ತ ಮಾನವೀಯತೆಗೂ ಕೂಡಾ ಸಾಕ್ಷಿಯಾಗಿದ್ದಾರೆ. ಜನರ ಬೇಡಿಕೆ ನೋಡಿಕೊಂಡು ಇನ್ನಿತರೆ ಒಂದೆರಡು ಪದಾರ್ಥಗಳನ್ನು ಹೆಚ್ಚಿಸಬೇಕು ಎನ್ನುವ ಗುರಿ ಹೊಂದಿದ್ದಾರೆ.
ಒಟ್ಟಿನಲ್ಲಿ, ಮೊಬೈಲ್ ಕ್ಯಾಂಟೀನ್ ಗಳ ಜೊತೆಗೆ ಮಹಾನಾಯಕರ ಹೆಸರಲ್ಲಿ ದೊಡ್ಡ ಹೊಟೇಲ್ ಆರಂಭಿಸಿ, ಕಡಿಮೆ ಬೆಲೆಯಲ್ಲು ಬಡವರಿಗೆ ಊಟ ಉಪಾಹಾರ ನೀಡಬೇಕೆನ್ನುವ ಗುರಿ ಹೊಂದಿದ್ದಾರೆ.....!
Kshetra Samachara
24/01/2021 11:04 am