ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಿಂದ ಆಂಧ್ರಪ್ರದೇಶಕ್ಕೆ ವಾಹನ ರಫ್ತು

ಧಾರವಾಡ: ಧಾರವಾಡ ಅಂದ್ರೇನೆ ಹಾಗೆ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಹಾಗೂ ಒಂದಿಲ್ಲೊಂದು ಸಾಧನೆಯಲ್ಲಿ ತನ್ನ ಹೆಸರು ಇಟ್ಟುಕೊಂಡಿರುತ್ತದೆ. ಇದೀಗ ಧಾರವಾಡದ ಟಾಟಾ ಮಾರ್ಕೋಪೋಲೋ ಕಂಪೆನಿಯು ಒಟ್ಟು 6 ಸಾವಿರ ಟಾಟಾ ಏಸ್ ವಾಹನಗಳನ್ನು ಆಂಧ್ರಪ್ರದೇಶಕ್ಕೆ ರಫ್ತು ಮಾಡುವ ಮೂಲಕ ಮತ್ತೊಮ್ಮೆ ಇಡೀ ರಾಜ್ಯ ಧಾರವಾಡದತ್ತ ನೋಡುವಂತೆ ಮಾಡಿದೆ.

ಹೌದು! ಈ ದೃಶ್ಯಗಳಲ್ಲಿ ನೀವು ನೋಡುತ್ತಿರುವ ವಾಹನಗಳು ಕಳೆದ ಎಂಟತ್ತು ದಿನಗಳಿಂದ ಅಲ್ಲಲ್ಲಿ ಸುತ್ತಾಡಿ ಗಮನಸೆಳೆಯುತ್ತಿವೆ. ಅರೆರೆ ಇದೇನಪ್ಪ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಭಾವಚಿತ್ರ ಹಾಕಿಕೊಂಡು ಓಡಾಡಬೇಕಿದ್ದ ಈ ವಾಹನಗಳು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರ ಭಾವಚಿತ್ರ ಹಾಕಿಕೊಂಡು ಓಡಾಡುತ್ತಿವೆಯಲ್ಲ ಎಂದು ನೀವು ಅಂದುಕೊಂಡಿರಬಹುದು. ಆದರೆ, ವಾಸ್ತವವೇ ಬೇರೆ. ಅದೇನಪ್ಪ ಅಂತೀರಾ ಈ ಸ್ಟೋರಿ ನೋಡಿ.

ಧಾರವಾಡದ ಟಾಟಾ ಮಾರ್ಕೋಪೋಲೋ ಕಂಪೆನಿಯು ಇಂತಹ ಒಟ್ಟು 6 ಸಾವಿರ ವಾಹನಗಳನ್ನು ರೆಡಿ ಮಾಡ್ತಿದೆ. ಈಗಾಗಲೇ ಅನೇಕ ವಾಹನಗಳು ರೆಡಿಯಾಗಿ ಆಂಧ್ರಪ್ರದೇಶದತ್ತ ಕೂಡ ಹೋಗಿವೆ. ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರು ತಾವು ಜಾರಿಗೆ ತಂದ ಹಲವು ಯೋಜನೆಗಳನ್ನು ಆ ರಾಜ್ಯದ ಜನರ ಮನೆ ಮನೆಗೆ ತಲುಪಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅದಕ್ಕಾಗಿ ಧಾರವಾಡದ ಮಾರ್ಕೋಪೋಲೋ ಕಂಪೆನಿಗೆ ಇಂತಹ 6 ಸಾವಿರ ವಾಹನಗಳನ್ನು ರೆಡಿ ಮಾಡಿಕೊಡುವಂತೆ ಆರ್ಡರ್ ನೀಡಿದ್ದಾರೆ. ಆಂಧ್ರಪ್ರದೇಶಕ್ಕೆ ಧಾರವಾಡದ ಹೆಮ್ಮೆಯ ಟಾಟಾ ಮಾರ್ಕೋಪೋಲೋ ಕಂಪೆನಿಯಿಂದ ಟಾಟಾ ಏಸ್ ವಾಹನಗಳು ರೆಡಿಯಾಗಿ ಹೋಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಅಲ್ವೆ.

ಆಂಧ್ರಪ್ರದೇಶ ಸರ್ಕಾರ ಈ ಆರ್ಡರ್ ನೀಡಿರುವುದರಿಂದ ಉದ್ಯೋಗ ಕೂಡ ಸೃಷ್ಟಿಯಾಗಿದೆ. ಅಲ್ಲಿನ ಮುಖ್ಯಮಂತ್ರಿ ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳಿಂದ ಯಾರೂ ವಂಚಿತವಾಗಬಾರದು ಅಂತಾ ಯೋಜನೆಗಳನ್ನು ಮನೆಗೆ ಮನೆಗೆ ತಲುಪಿಸುವ ಉದ್ದೇಶ ಹೊಂದಿ ಇಂತಹ ವಾಹನಗಳನ್ನು ರೆಡಿ ಮಾಡಿಸಿದ್ದಾರೆ.

ಸದ್ಯ ಸುಮಾರು ಮೂರ್ನಾಲ್ಕು ಸಾವಿರ ವಾಹನಗಳು ರೆಡಿಯಾಗಿದ್ದು, ಅವು ಆಂಧ್ರಪ್ರದೇಶಕ್ಕೆ ಹೋಗಲು ರೆಡಿಯಾಗಿವೆ. ಏನೇ ಆಗಲಿ ಆಂಧ್ರಪ್ರದೇಶ ಸರ್ಕಾರ ಈ ರೀತಿ ಕೆಲಸವನ್ನು ಧಾರವಾಡದ ಟಾಟಾ ಮಾರ್ಕೋಪೋಲೋ ಕಂಪೆನಿಗೆ ವಹಿಸಿ ಕಂಪೆನಿಯ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಿರುವುದರ ಜೊತೆಗೆ ಕೆಲಸಗಾರರಿಗೆ ಕೆಲಸ ಸಿಗುವಂತೆ ಮಾಡಿದೆ. ಜೊತೆಗೆ ಧಾರವಾಡದ ಟಾಟಾ ಮಾರ್ಕೋಪೋಲೋ ಕಂಪೆನಿ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಧಾರವಾಡಕ್ಕೆ ಮತ್ತೊಂದು ಹಿರಿಮೆಯನ್ನು ತಂದುಕೊಟ್ಟಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Nagesh Gaonkar
Kshetra Samachara

Kshetra Samachara

08/01/2021 05:24 pm

Cinque Terre

40.19 K

Cinque Terre

11

ಸಂಬಂಧಿತ ಸುದ್ದಿ