ಧಾರವಾಡ: ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದ್ದು, ಕೈ ಹಾಗೂ ಕಾಲು ಸ್ವಾಧೀನ ಕಳೆದುಕೊಂಡ ಪದವೀಧರರೊಬ್ಬರು ತಮ್ಮ ಹಕ್ಕು ಚಲಾಯಿಸಲು ವೀಲ್ ಚೇರ್ ಮೇಲೆಯೇ ಮತಗಟ್ಟೆಗೆ ಬಂದು ಗಮನಸೆಳೆದರು.
ಧಾರವಾಡದ ವಿದ್ಯಾರಣ್ಯ ಶಾಲೆಯಲ್ಲಿ ತೆರೆಯಲಾದ ಮತಗಟ್ಟೆಗೆ ಗಾಂಧಿಚೌಕ್ ನಿವಾಸಿ ಶಶಾಂಕ ದೇಶಪಾಂಡೆ ಎಂಬುವವರೇ ಹೀಗೆ ವೀಲ್ ಚೇರ್ ಮೇಲೆ ಬಂದು ಮತ ಚಲಾಯಿಸಿ ಗಮನಸೆಳೆದವರು. ಇವರು ಬಿಎ ಪದವೀಧರರಾಗಿದ್ದು, ಕೆಲ ವರ್ಷಗಳ ಹಿಂದೆ ತಮ್ಮ ಕೈ ಹಾಗೂ ಕಾಲು ಸ್ವಾಧೀನ ಕಳೆದುಕೊಂಡಿದ್ದಾರೆ.
ನಡೆದಾಡಲು ಆಗದ ಕಾರಣ ಅವರ ಮನೆಯವರೇ ಮತದಾನ ಮಾಡಲು ಕರೆದುಕೊಂಡು ಬಂದಿದ್ದರು.ಮತದಾನ ಮಾಡಿದ್ದಕ್ಕೆ ಶಶಾಂಕ್ ಅವರು ಪಬ್ಲಿಕ್ ನೆಕ್ಸ್ಟ್ ಮೂಲಕ ಸಂತಸ ಹಂಚಿಕೊಂಡರು.ಕೈ, ಕಾಲು ಸ್ವಾಧೀನ ಕಳೆದುಕೊಂಡರೂ ಶಶಾಂಕ್ ಹುಮ್ಮಸ್ಸಿನಿಂದ ಬಂದು ಮತದಾನ ಮಾಡಿದ್ದು, ಇವರು ಉಳಿದ ಪದವೀಧರರಿಗೆ ಮಾದರಿ ಎನಿಸುತ್ತಾರಲ್ಲವೇ?
Kshetra Samachara
28/10/2020 12:29 pm