ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!
ಹುಬ್ಬಳ್ಳಿ: ಅದು ಕಲಘಟಗಿ ತಾಲ್ಲೂಕಿನ ಕಾಡಂಚಿನ ಪ್ರದೇಶ. ಇಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು ಅಂದರೆ ದೊಡ್ಡ ಸಾಹಸವನ್ನೇ ಮಾಡಬೇಕಾಗಿದೆ. ಹೆಣ್ಣೊಂದು ಕಲೆತರೇ ಶಾಲೆಯೊಂದು ತೆರೆದಂತೆ ಎಂಬುವಂತ ಮಾತಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತು ಕೂಡ ಇಲ್ಲ. ಇಲ್ಲಿನ ಪರಿಸ್ಥಿತಿಯನ್ನೊಮ್ಮೆ ನೋಡಿದರೇ ನಿಜಕ್ಕೂ ಶೋಚನೀಯವಾಗಿದೆ. ಹಾಗಿದ್ದರೇ ಯಾವುದು ಆ ಪ್ರದೇಶ...? ಅಲ್ಲಿರುವ ಸಮಸ್ಯೆ ಆದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...
ಹೀಗೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮ. ಶಾಲೆ ಕಲಿಯಬೇಕು ಎಂಬುವಂತ ಮಕ್ಕಳ ಕನಸು ಈಗ ಹುಸಿಯಾಗುವತ್ತ ಸಾಗಿದೆ. ಹೌದು ಇದಕ್ಕೆ ಸಾಕ್ಷಿಯಾಗಿಯಾಗಿರುವ ಊರು ಕಲಘಟಗಿಯ ಕಾಡು ಅಂಚಿನ ಪ್ರದೇಶ ಗೌಳಿ ದಡ್ಡಿ. ಇಲ್ಲಿನ ಮಕ್ಕಳು ಶಾಲೆ ಕಲೆಯಬೇಕು ಅಂದರೆ ಬಹುದೊಡ್ಡ ಸಾಹಸವನ್ನೇ ಮಾಡಬೇಕಾಗಿದೆ. ಅಲ್ಲದೇ ಇಲ್ಲಿನ ಶಾಸಕರ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಸರಿಯಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಇಲ್ಲವಾಗಿದೆ. ಅಲ್ಲದೇ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಹೋಗಬೇಕು ಅಂದ್ರು ಕೂಡ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಕಾಡಿನ ಮಧ್ಯದಲ್ಲಿ ನಡೆದುಕೊಂಡು ಹೋಗಬೇಕಿದೆ. ಅಲ್ಲದೆ ಕಾಡು ಪ್ರಾಣಿಗಳ ಹಾವಳಿಯಿಂದ ಕಲಿಕೆಯೇ ಬೇಡವೆಂದು ಕುಟುಂಬಸ್ಥರ ಆಗ್ರಹದ ಮೇರೆಗೆ ಎಷ್ಟೋ ಪ್ರತಿಭೆಗಳು ಗುಡಿಸಲಿನಲ್ಲಿಯೇ ಉಳಿದು ಬಿಟ್ಟಿವೆ.
ಜಗತ್ತು ಇಷ್ಟು ಆಧುನಿಕತೆಯತ್ತ ಮುಂದುವರೆದಿದ್ದರೂ ಇಲ್ಲಿನ ಜನರ ಸಮಸ್ಯೆ ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಹೆಣ್ಣೊಂದು ಕಲೆತರೇ ಶಾಲೆಯೊಂದು ತೆರೆದಂತೆ ಎಂಬುವಂತ ಮಾತು ಕೇವಲ ಪುಸ್ತಕದ ಗಾದೆಯಾಗಿಯೇ ಉಳಿದಿವೆ. ಹೀಗಿದ್ದರೂ ಕೂಡ ಯಾವುದೇ ಜನಪ್ರತಿನಿಧಿಗಳಾಗಲಿ ಶಾಸಕರಾಗಲಿ ಯಾವುದೇ ರೀತಿಯ ವ್ಯವಸ್ಥೆ ಕಲ್ಪಿಸದೇ ಇಲ್ಲಿನ ಜನರ ಬಗ್ಗೆ ನಿಷ್ಕಾಳಜಿ ತೋರುತ್ತಿದ್ದಾರೆ. ಅಲ್ಲದೆ ವೋಟ್ ಬ್ಯಾಂಕ್ ರೀತಿಯಲ್ಲಿ ಚುನಾವಣೆ ಮಾತ್ರವೇ ಈ ಗೌಳಿ ದಡ್ಡಿಯ ಗ್ರಾಮವನ್ನು ನೆನಪಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಕಾಡಂಚಿನ ಗೌಳಿದಡ್ಡಿಯ ಜನರ ಗೋಳು ಹೇಳ ತೀರದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ಸರ್ವಾಂಗೀಣ ಅಭಿವೃದ್ಧಿ ಮಂತ್ರದ ಮಾತನ್ನು ಹೇಳುತ್ತಿದೆ. ಆದರೆ ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಹಾಗೂ ಶಿಕ್ಷಣ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೂಡಲೇ ಈ ಬಗ್ಗೆ ವ್ಯವಸ್ಥಿತ ಯೋಜನೆ ಜಾರಿ ಮಾಡಿ ಇಲ್ಲಿನ ಜನರ ಕಣ್ಣೀರು ಒರೆಸುವ ಕಾರ್ಯ ಮಾಡಬೇಕಿದೆ.
Kshetra Samachara
08/09/2021 05:57 pm