ಹುಬ್ಬಳ್ಳಿ: ಕೊರನಾ ಹಾವಳಿಯಿಂದ ದೇಶವನ್ನೆ ಲಾಕ್ ಡೌನ್ ಮಾಡಲಾಗಿತ್ತು ಆ ಸಮಯವನ್ನು ಸದುಪಯೋಗ ಪಡೆದುಕೊಂಡ ಬಾಲನೊಬ್ಬ ನೂರಾರು ಕಲಾ ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ....
ಹೀಗೆ ಚಿತ್ರಗಳನ್ನು ವೀಕ್ಷಣೆ ಮಾಡಲು ಬಂದವರಿಗೆ, ಕಲಾ ಚಿತ್ರಗಳ ಬಗ್ಗೆ ವಿವರಣೆ ಮಾಡುತ್ತಿರುವ ಈ ಚಿಕ್ಕ ಮಗುವಿನ ಹೆಸರು, ಅಭಿನವ ಚಕ್ರವರ್ತಿ. ಈ ಮಗು ಹೆಸರಾಂತ ಕಲಾವಿದ ಪಾಬ್ಲೊ ಪಿಕಾಸೊ ಮಾದರಿಯಲ್ಲಿ ಕೊರೊನಾ ಚಿತ್ರ, ಮನೆ, ಗಣಪತಿ, ಗಾಂಧಿಜೀ, ತರಕಾರಿ, ಪರಿಸರ ಕಾಳಜಿ ಹೀಗೆ ಸುಮಾರು 300 ಕ್ಕೂ ಹೆಚ್ಚು ಕಲಾ ಚಿತ್ರಗಳನ್ನು ತೆಗೆದಿದ್ದಾನೆ......
ಶಾಲೆಗಳು ಸಂಪೂರ್ಣ ಬಂದ್ ಆಗಿರುವುದರಿಂದ, ಮಕ್ಕಳ ಶಿಕ್ಷಣದ ಉದ್ದೇಶದಿಂದ ಆನ್ಲೈನ್ ಕ್ಲಾಸ್ ಆರಂಭಿಸಿದರು. ಎಲ್ಲ ಮಕ್ಕಳು ಮೂಬೈಲ್ ಅಂತ ನೋಡುತ್ತಿದ್ದರೆ. ಈ ಮಗು ಆರ್ಟ್ ಮಾಡುವುದರ ಮೂಲಕ ಸಾವಿರಾರು ಮಕ್ಕಳಲ್ಲಿ ಮಾದರಿಯಾಗಿದ್ದಾನೆ.....
ಚಿಕ್ಕ ವಯಸ್ಸಿನಲ್ಲಿ ಅಭಿನವ, ಹೀಗೆ ಹಲವಾರು ಭಂಗಿಯಲ್ಲಿ ಚಿತ್ರಗಳನ್ನು ತೆಗೆದು, ಇಂದು ಪ್ರದರ್ಶನಕ್ಕೆ ಇಟ್ಟಿದ್ದು, ಸಾಕಷ್ಟು ಮಕ್ಕಳು ಬಂದು ನೋಡಿ ಖುಷಿ ಪಟ್ಟಿದ್ದಾರೆ......!
Kshetra Samachara
08/11/2020 06:31 pm