ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕರ್ನಾಟಕದಲ್ಲಿ ಸಖತ್ ಸದ್ದು ಮಾಡುತ್ತಿದೆ ಬಸವರಾಜ ಹಾಡಿರುವ ಗಿಚ್ ಗಿಲಿ ಗಿಲಿ ಸಾಂಗ್

ವರದಿ : ಈರಣ್ಣ ವಾಲಿಕಾರ

ಹುಬ್ಬಳ್ಳಿ- ಜನರ ಬಟ್ಟೆಗಳನ್ನು ಚಂದವಾಗಿ ಇಸ್ತ್ರಿ ಮಾಡಿ, ಅವರ ಅಂದಕ್ಕೆ ಸಾಕ್ಷಿಯಾಗಿರುವ ಈ ವ್ಯಕ್ತಿ, ಇದೀಗ ಉತ್ತರ ಕರ್ನಾಟಕದಲ್ಲಿ ಜನಪದ ಹಾಡುಗಳ ಮೂಲಕ, ಪ್ರತಿಯೊಬ್ಬ ಜನರ ಹೃದಯ ಸಾಕ್ಷಿಯಾಗಿ ಅಚ್ಚಳ್ಳಿಯಾಗಿ ಉಳಿದಿದ್ದಾರೆ. ಇಸ್ತ್ರಿ ಮಾಡುವ ಈತ ಪವೃತ್ತಿ ಯಾಗಿ ಸಂಗೀತದಲ್ಲಿ ಬದುಕು ಕಟ್ಟಿಕೊಳ್ಳುತ್ತೀರುವ ಕಲಾವಿದ ಯಾರೆಂಬುದನ್ನಾ ತೋರಸ್ತೇವಿ ನೋಡಿ......

ಬೆಳಿಗ್ಗೆ ಎದ್ದು ಇಸ್ತ್ರಿ ಪಟ್ಟಿಗೆ ಕಾಯಿಸಲು ಲೈಟ್ ಬಟ್ಟನ್ ಆನ್ ಮಾಡಲಿಲ್ಲಾ ಅಂದ್ರೆ, ಅವರ ಜೀವನ ಮುಂದೆ ಸಾಗುವುದಿಲ್ಲ. ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಾ ಹಾಡುಗಳ ಸುರಿಮಳೆ ಸುರಿಸುವ ಈತನ ಹೆಸರು, ಬಸವರಾಜ ಮಡಿವಾಳರ. ಎಲ್ಲರೂ ಈತನನ್ನು ಮುದಕಪ್ಪ ಎಂದು ಕರೆಯುತ್ತಾರೆ. ಮುದಕಪ್ಪ ಮೂಲತಃ ಧಾರವಾಡ ಜಿಲ್ಲೆಯ ಮೊರಬ ಗ್ರಾಮದ ಈತ. ಇದೀಗ ಹುಬ್ಬಳ್ಳಿ ಗೋಪನಕೊಪ್ಪದ ಸಂತೋಷ ನಗರದಲ್ಲಿ ವಾಸವಾಗಿದ್ದಾರೆ. ಇವರ ಗಿಚ್ಚ ಗಿಲಿಗಿಲಿ ಜನಪದ ಹಾಡು ಇದೀಗ ಯುಟೂಬ್ಯ್ ನಲ್ಲಿ ಸಿಕಾಪಟ್ಟೇ ಟ್ರೇಡಿಂಗ್ ಆಗಿದ್ದು, 1ಮಿಲಿಯನ್ ನೋಡಗಗರನ್ನು ಪಡೆದಿದ್ದು, ಉತ್ತರ ಕರ್ನಾಟಕದ ಜನರ ಮನಸ್ಸನ್ನು ಸೆಳೆದಿದ್ದು ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಏರುತ್ತಲೇ ಇದೇ.......

ಇನ್ನು ಮುದಕಪ್ಪ ಬಟ್ಟೆಗಳಿಗೆ ರೂಪ ಕೊಡುವುದರ ಜೊತೆಗೆ, ಸಂಗೀತ ಲೋಕದಲ್ಲಿ ಕೂಡಾ ತಮ್ಮ ಹೆಸರನ್ನು ಸಹ ಮಾಡಿಕೊಂಡಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಜನಪದ ಹಾಡುಗಳನ್ನು ರಚಿಸಿ, ಅದಕ್ಕೆ ಸಾಹಿತ್ಯ ನೀಡಿ ಸಂಯೋಜನೆ ಮಾಡಿ ಸಂಗೀತ ನೀಡಿದ್ದ ಮುದಕಪ್ಪನಿಗೆ, ರಾಜ್ಯ ಮಟ್ಟದ ಬಸವ ಸದ್ಭಾವನ ಪ್ರಶಸ್ತಿ, ಜಾನಪದ ಸಂಸ್ಕೃತಿಕ ಕಲಾ ಸೌರಭ, ಧಾರವಾಡ ಜಿಲ್ಲಾ ಉತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಬಸವರಾಜ, ಲಾಕ್ ಡೌನ್ ಸಮಯದಲ್ಲಿ,

ಹೊರಗೆ ಬಾ ಗೆಳತಿ ಕೊರೋನಾ ಕಮ್ಮಿ ಆಯ್ತು, ಲಾಕ್ ಡೌನ್ ಓಪನ್ ಆಯ್ತು ಜನಪದ ಹಾಡು ಲಕ್ಷಾಂತರ ಜನರಲ್ಲಿ ಮನೆಮಾತಾಗಿದ್ದಾರೆ. ಅದರ ಜೊತೆಗೆ ತನ್ನ ಕಲೆಗೆ ತಕ್ಕ ವೇದಿಕೆ ಸಿಗಲಿ ಎನ್ನುವದು ಕುಟುಂಬಸ್ಥರು ಹಾಗೂ ಪ್ರೇಕ್ಷಕರು ಆಸೆ ಆಗಿದೆ....

ಒಟ್ಟಿನಲ್ಲಿ ಜನಪದ ಹಾಡುಗಳ ಮೂಲಕ, ಪ್ರೇಮಿಗಳ ಹಾಗೂ ಸಂಗೀತ ರಸಿಕರ ಮನಸ್ಸನ್ನು ಕದ್ದಿರುವ ಮುದಕಪ್ಪ. ಇನ್ನೂ ಹೆಚ್ಚು ಹಾಡುಗಳಿಗೆ ರೂಪವನ್ನು ಕೊಟ್ಟು ಉತ್ತರ ಕರ್ನಾಟಕದ ಹೆಸರನ್ನು ಉತ್ತುಂಗ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದೇ ಎಲ್ಲರ ಆಶಯ. ವೇದಿಕೆ ಕಲ್ಪಿಸಿ ಕೊಡುವವರು 9019815152 ನಂಬರಗೆ ಸಂಪರ್ಕಿಸಬಹುದು.......!

Edited By : Nagesh Gaonkar
Kshetra Samachara

Kshetra Samachara

25/12/2020 07:42 pm

Cinque Terre

86.9 K

Cinque Terre

22

ಸಂಬಂಧಿತ ಸುದ್ದಿ