ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯುವತಿಯ ಪ್ರಾಣ ಉಳಿಸಿದ ಮಂಜುನಾಥ ಬೆಳಗಲಿ ಅವರಿಗೆ ಸಂಸ್ಕಾರ ಫೌಂಡೇಶನ್ ವತಿಯಿಂದ ಸನ್ಮಾನ

ಹುಬ್ಬಳ್ಳಿ- ಇಂದು ಬೆಳಿಗ್ಗೆ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿದ್ದ ಯುವಕನನ್ನು ತಡೆದು, ಯುವತಿಯ ಪ್ರಾಣ ಉಳಿಸಿದ ಮಂಜುನಾಥ್ ಬೆಳೆಗಲಿ ಅವರಿಗೆ, ಸಂಸ್ಕಾರ ಫೌಂಡೇಶನ್ ವತಿಯಿಂದ ಇಂದು ಸನ್ಮಾನ ಮಾಡಲಾಯಿತು.

ಹುಬ್ಬಳ್ಳಿಯಲ್ಲಿ ಇಂದು ಬೆಳಿಗ್ಗೆ ಪಾಗಲ್ ಪ್ರೇಮಿಯೂಬ್ಬ ತನನ್ನು ಪ್ರೀತಿಸಿಲ್ಲಾ ಎಂಬ ಕಾರಣಕ್ಕೆ, ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಿದ್ದ ಸಂದರ್ಬದಲ್ಲಿ, ದಾರಿಯಲ್ಲಿ ಹೋಗುತ್ತಿರುವಾಗ ಘಟನೆ ನೋಡಿದ ತಕ್ಷಣವೆ, ಯುವತಿಯ ಮೇಲಿನ ಹಲ್ಲೆ ತಡೆದು ಯುವತಿಯ ಪ್ರಾಣ ಉಳಿಸಿದ್ದರು..

ಎಲ್ಲರಿಗೂ ಇವರ ಕಾರ್ಯ ಮಾದರಿಯಾಗಲಿ ಎಂಬ ಸದ್ದುದೇಶದಿಂದ, ಸಂಸ್ಕಾರ ಫೌಂಡೇಶನ್ ವತಿಯಿಂದ ಸನ್ಮಾನ ಮಾಡಲಾಯಿತು. ಇದೆ ರೀತಿ ಎಲ್ಲರು ಮಹಿಳೆಯರ ಮೇಲೆ ಎಲ್ಲೇ ಹಲ್ಲೆ ನಡೆಯುತ್ತಿದ್ದರೂ ಖಂಡಿಸಿ, ಮಹಿಳೆಯರನ್ನು ರಕ್ಷಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು....

Edited By : Nagesh Gaonkar
Kshetra Samachara

Kshetra Samachara

21/12/2020 03:57 pm

Cinque Terre

55.31 K

Cinque Terre

6

ಸಂಬಂಧಿತ ಸುದ್ದಿ