ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ- ಅವರು ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ, ನಿರಂತರವಾಗಿ ರಂಗ ಭೂಮಿ ಕಲಾವಿದೆಯಾಗೆ ಸೇವೆ ಸಲ್ಲಿಸಿದ್ದರು. ಅವರು ಮಾಡಿರುವ ಸಾಧನೆಗೆ, ಈಗ ರಾಜ್ಯಮಟ್ಟದಿಂದ ಹಿಡಿದ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಂದಿವೆ....!
ಹೀಗೆ ನೂರಾರು ಪ್ರಶಸ್ತಿ ಬಾಚಿಕೊಂಡಿರುವ ಇವರ ಹೆಸರು, ವೀಣಾ ಆರ್.ಅಠವಲೆ. ಮೂಲತಃ ಹುಬ್ಬಳ್ಳಿ ನಿವಾಸಿ, ಚಿಕ್ಕ ವಯಸ್ಸಿನಲ್ಲೇ ನಾಟಕದಲ್ಲಿ ಪರಿಣಿತರಾಗಿದ್ದ ಇವರು, ರಂಗಭೂಮಿ ಕಲಾವಿದೆಯಾಗಿ ಉತ್ತಮ ಸಾಧನೆ ಮಾಡಿದ್ದಾರೆ.
ಸರಕಾರಿ ಶಾಲೆಯಲ್ಲಿ ಶಿಕ್ಷಕಿ ಆಗಿ ಕಾರ್ಯನಿರ್ವಾಹಿಸಿ, ಸದ್ಯ ನಿವೃತ್ತ ಹೊಂದಿ. ಉಚಿತವಾಗಿ ಮಕ್ಕಳಿಗೆ ಏಕಾಭಿನಯ,ಸಾಂಸ್ಕೃತಿಕ ನಾಟಕ ಹೇಳಿಕೊಡುತ್ತಿದ್ದಾರೆ.
ನೂರಕ್ಕೂ ಹೆಚ್ಚು ನಾಟಕ ಮಾಡಿರುವ ಇವರು, ಸಾಧನೆಗೆ ರಾಜ್ಯ ಹಾಗೂ ಗವರ್ನರ್ ಅವಾರ್ಡ್ ಸಹ ದೊರೆತಿವೆ. ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ನಾಟಕಗಳನ್ನು ಕಲಿಸುವ ಮೂಲಕ ಮಕ್ಕಳ ನೆಚ್ಚಿನ ಶಿಕ್ಷಕಿಯಾಗಿದ್ದಾರೆ. ಅನಾಥರ ಮಾಯೆ ಎಂಬ ನಾಟಕದ ಮೂಲಕ ಜನಪ್ರಿಯ ಸಹ ಗಳಿಸಿದ್ದಾರೆ.....
ಇನ್ನು ಇವರ ಸಾಧನೆಗೆ ಒಲಿದು ಬಂದ ಪ್ರಶಸ್ತಿಗಳು, ಸಾಂಸ್ಕೃತಿಕ ಚಟುವಟಿಕೆಗಾಗಿ ಉತ್ತಮ ಕಲಾವಿದೆ ಪ್ರಶಸ್ತಿ, ಧಾರವಾಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ರಂಗ ಸಪ್ತಾಹ, ರಂಗ ಕಲಾ ಪ್ರಶಸ್ತಿ, ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆ ರಾಜ್ಯಮಟ್ಟದ ಶಿಕ್ಷಣ ಶಿರಿ ಪ್ರಶಸ್ತಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯಮಟ್ಟದ ಗವರ್ನರ ಅವಾರ್ಡಪ್ರಶಸ್ತಿ ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಹೀಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ, ಮಕ್ಕಳಲ್ಲಿ ರಂಗ ಭೂಮಿ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ...
ಒಟ್ಟಿನಲ್ಲಿ ರಂಗಭೂಮಿ ಕಲಾವಿದರಾಗಿ, ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ಇವರ ಸಾಧನೆ, ಇನ್ನಷ್ಟು ಎತ್ತರಕ್ಕೆ ಬೆಳಯಲಿ, ಹಾಗೂ ರಂಗಭೂಮಿ ಕಲೆ ಅಳಿಸಿಹೋಗಬಾರದು ಎಂದು, ಉಚಿತವಾಗಿ ಮಕ್ಕಳಿಗೆ ನಾಟಕ ಕಲಿಸುತ್ತಿರುವ ಇವರ ಕಾರ್ಯ ಹೀಗೆ ಸಾಗಲಿ ಎನ್ನುವುದೆ ಎಲ್ಲರ ಆಶಯ.......!
Kshetra Samachara
24/11/2020 12:32 pm