ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಅನ್ನದಾತನ ಮೊಗದಲ್ಲಿ ಹೊಸ ಆನಂದ ತಂದ ಕೃಷಿಹೊಂಡದ ಜಲ

ಗದಗ : ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲೂ ಎಂಬ ಮಾತಿನಂತೆ, ಇಲ್ಲೋಬ್ಬ ರೈತ ತಾನೊಬ್ಬ ಬಿಎ ಪದವೀಧರ ಎಂಬುದನ್ನು ಬದಿಗೊತ್ತಿ ಕೃಷಿ ಕಾಯಕದಲ್ಲೇ ಹೆಸರಾಗಿ ಹಸನಾದ ಬದುಕಿಗೆ ಕೃಷಿಹೊಂಡದ ಕೃಷಿಯನ್ನೇ ಆಶ್ರಯ ಮಾಡಿಕೊಂಡಿದ್ದಾರೆ.

ಹೌದು ! ಗದಗ ಜಿಲ್ಲೆಯ ಮದಗಾನೂರ ಗ್ರಾಮದ ರೈತ ಬಸವರೆಡ್ಡಿ ಮಲ್ಲಪ್ಪ ಮರಡೂರ ಅವರೇ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡ ತಮ್ಮ ಜಮೀನಿನಲ್ಲಿ ಹೊಸ ಹೊಸ ಕೃಷಿ ಪದ್ಧತಿ ಅನುಸರಿಸಿ ವಿಧ ವಿಧ ಬೆಳೆ ಬೆಳೆದವರು ಆ ಮೂಲಕ ಸಂತಸ ಕಂಡವರು.

ತಮ್ಮ 4 ಎಕರೆ 12 ಗುಂಟೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಒಣ ಬೇಸಾಯದ ಬೆಳೆಯಂತೆ ಹುಲುಸಾದ ಬೆಳೆಯನ್ನು ಕೃಷಿಹೊಂಡ ಆಶ್ರಿತವಾಗಿ ಬೆಳೆದಿದ್ದಾರೆ.

ಈಗಾಗಲೇ ರೈತ ಬಸವರೆಡ್ಡಿ ಜಮೀನಿನಲ್ಲಿ ಮುಂಗಾರು ಮೆಣಸಿನಕಾಯಿ, ಹೆಸರು, ಶೇಂಗಾ ಬೆಳೆ ಅಲ್ಪ ಲಾಭ ಕೊಟ್ಟರೇ, ಸಧ್ಯ ಜಮೀನಲ್ಲಿರುವ ಕಡಲೆ, ಗೋಧಿ, ಜೋಳ, ಹವೀಜ ಬೆಳೆಗಳಿಗೂ ಹೆಚ್ಚಿನ ಆದಾಯದ ನಿರೀಕ್ಷೆಯನ್ನು ಮೂಡಿಸಿವೆ.

ಇದೇ ಮೊದಲು ಒಣ ಬೇಸಾಯದ ನೆಲದಲ್ಲಿ ಮಳೆಯನ್ನೆ ನಂಬಿದ್ದ, ರೈತರಿಗೆ ಕೃಷಿಹೊಂಡದ ನೀರು ವರದಾನವಾಗಿ ಈ ಬಾರಿ 3 ಲಕ್ಷ ಆದಾಯದ ಖುಷಿಗೆ ಕಾರಣವಾಗಿದೆ.

ಒಟ್ಟಾರೆ ಕೃಷಿ ಕ್ಷೇತ್ರದಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ ಅನ್ನದಾತನ ಮೊಗದಲ್ಲಿ ಹೊಸ ಭರವಸೆ ತಂದಿದೆ‌.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/01/2022 05:45 pm

Cinque Terre

188.14 K

Cinque Terre

1

ಸಂಬಂಧಿತ ಸುದ್ದಿ