ನವಲಗುಂದ: ಕುಟುಂಬದ ಪರಿಸ್ಥಿತಿ ನಡುವೆ ಮನೆಗೆ ಆಸರೆಯಾಗಲು ಶಿಕ್ಷಣವನ್ನೂ ಅರ್ಧಕ್ಕೆ ಬಿಟ್ಟ ಯುವಕನೋರ್ವ, ಅಪ್ಪಟ ರೈತನಾಗಿ ರೈತಾಪಿ ದುಡಿಮೆಯಲ್ಲೇ ದೀರನಾಗಿ ಈದೀಗ ಲಕ್ಷ ಲಕ್ಷ ಆದಾಯ ಗಳಿಸುತ್ತಾ ಪದವಿಗಿಂತ ರೈತಾಪಿ ಕೆಲಸವೇ ಮೇಲು ಎನ್ನುತ್ತಿದ್ದಾನೆ.
ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ವಿಶ್ವನಾಥ ಪಾಟೀಲ್ ಪಿಯುಸಿ ಶಿಕ್ಷಣದ ಜೊತೆಗೆ ಕೃಷಿಯನ್ನೇ ಬದುಕಿಗೆ ಬಂಡವಾಳವಾಗಿಸಿಕೊಂಡು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/180 ಸುತ್ತಳತೆ ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ತಮ್ಮ 18 ಎಕರೆ ಹೊಲದಲ್ಲಿ ವಿಧ ವಿಧದ ಬೆಳೆ ಬೆಳೆದು ಕೃಷಿಯಲ್ಲೇ ಸಾಧಕರೆನಿಸಿಕೊಂಡಿದ್ದಾರೆ.
ತಮ್ಮ 18 ಎಕರೆ ಜಮೀನಿನಲ್ಲಿ ಗೋವಿನಜೋಳ ಮತ್ತು ಹತ್ತಿ ಏಕಮಾತ್ರ ಬೆಳೆ ಬೆಳೆದು, ಈ ಬಾರಿ ವಾರ್ಷಿಕ ಆರರಿಂದ ಏಳು ಲಕ್ಷ ರೂಪಾಯಿ ಆದಾಯ ಗಳಿಸುವ ವಿಶ್ವಾಸದಲ್ಲಿದ್ದಾರೆ, ಇದೇ ಮೊದಲು ಒಣ ಬೇಸಾಯದ ಭೂಮಿಯಲ್ಲಿ ಬೆಳೆ ಹಾಗೂ ನೀರಾವರಿ ಮೂಲಕ ರಾತ್ರಿ ನೀರು ಹಾಯಿಸಲು ಕಷ್ಟ ಪಡುತ್ತಿದ್ದ ತಾಪತ್ರಯ, ಕೃಷಿಹೊಂಡ ನಿರ್ಮಾಣದ ಬಳಿಕ ರೈತನಿಗೆ ದೂರವಾಗಿದೆ.
ಇದಲ್ಲದೆ ದೇಶಪಾಂಡೆ ಫೌಂಡೇಶನ್ ಎಫ್.ಬಿ.ಓ ಮೂಲಕ ಬಿತ್ತನೆ ಬೀಜ ಪಡೆದು ಈ ಬಿತ್ತನೆ ಕೈಗೊಳ್ಳುವ ಆಶಯ ವ್ಯಕ್ತಪಡಿಸಿದ ರೈತ ವಿಶ್ವನಾಥ ಪಾಟೀಲ್, ತನ್ನಂತೆ ಇತರ ರೈತರಿಗೂ ಕೃಷಿ ಕ್ಷೇತ್ರದ ಸಾಧನೆಯ ಹಾದಿ ತೋರಿಸಿದ್ದಾರೆ.
ಈಗಾಗಲೇ ವಿಶ್ವನಾಥನ ಜಮೀನಿನಲ್ಲಿ ವಾಣಿಜ್ಯ ಬೆಳೆ ಹತ್ತಿ ಉತ್ತಮ ಕಾಯಿ ಹಿಡಿದಿದ್ದು, ಗರಿಷ್ಠ ಇನ್ನೂರು ಕ್ವಿಂಟಾಲ್'ಗೂ ಅಧಿಕ ಹತ್ತಿ ಬೆಳೆ ತೆಗೆಯುವ ವಿಶ್ವಾಸ ಹೊಂದಿದ್ದು, ಗೋವಿನಜೋಳದ ಬೆಳೆ ಕೂಡಾ ಅಷ್ಟೇ ಹುಲುಸಾಗಿದೆ.
ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಕಾರ್ಯ ಅದೆಷ್ಟೋ ರೈತರ ಬಾಳಲ್ಲಿ ಬೆಳಕು ಚೆಲ್ಲಿದ್ದು ರೈತ ವಿಶ್ವಾನಾಥನ ಬಾಳಲ್ಲಿ ಆತ್ಮವಿಶ್ವಾಸ ತುಂಬಿದೆ.
Kshetra Samachara
11/11/2021 05:59 pm