ಹುಬ್ಬಳ್ಳಿ: ನಾನು, ನಮ್ಮ ಮನೆ ಮಂದಿ ಚೆನ್ನಾಗಿ ಇದ್ದರೆ ಸಾಕು ಎನ್ನುವವರೇ ಹೆಚ್ಚು. ಆದರೆ ಇಲ್ಲೊಬ್ಬ ವ್ಯಕ್ತಿ ತಮ್ಮ ಗ್ರಾಮದ ಮಹಿಳೆಯರು ಹಾಗೂ ಮಕ್ಕಳಿಗೆ ತೊಂದರೆಯಾಗುವದನ್ನು ಮನಗಂಡು ತಾವೇ ಸ್ವಂತ ಖರ್ಚಿನಲ್ಲಿ ಕಳೆನಾಶಕ ಸಿಂಪಡಿಸುವ ಮೂಲಕ ಸಮಾಜ ಸೇವೆ ಮಾಡಿದ್ದಾರೆ.
ಹೀಗೆ ಕಳೆ ನಾಶಕ ಸಿಂಪಡಣೆ ಮಾಡುತ್ತಿರುವ ಇವರ ಹೆಸರು ಮಲಖಾಜಿ ಬಿಳೇಬಾಳ. ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದ ನಿವಾಸಿಯಾಗಿದ್ದು, ತಮ್ಮ ಗ್ರಾಮದ ಮಹಿಳೆಯರು, ಮಕ್ಕಳು ಜಮೀನು ಹಾಗೂ ಹಳ್ಳಕ್ಕೆ ಹೋಗಲು ಕಸ ಸಮಸ್ಯೆಯಾಗಿತ್ತು.
ಮೊಳಕಾಲುದ್ದ ಬೆಳೆದ ಕಸದಲ್ಲಿ ಹಾವು, ಚೇಳು ಸೇರಿದಂತೆ ಕೆಟ್ಟ ಹುಳುಗಳ ತಾಣವಾಗಿದ್ದು, ಜನರು ಓಡಾಡಲು ಭಯಪಡುತ್ತಿದ್ದರು. ಹೀಗಾಗಿ ಮಲಖಾಜಿ ಅವರು ಸ್ವಂತ ದುಡ್ಡಿನಲ್ಲಿ ಕಳೆ ನಾಶಕ ಸಿಂಪಡಣೆ ಮಾಡಿದ್ದಾರೆ.ಗ್ರಾಮ ಪಂಚಾಯತಿ ಮಾಡಬೇಕಿದ್ದ ಕೆಲಸವನ್ನು ಗ್ರಾಮೀಣ ಭಾಗದ ವ್ಯಕ್ತಿಯೊಬ್ಬ ಮಾಡಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Kshetra Samachara
16/11/2020 03:15 pm