ಪಬ್ಲಿಕ್ ನೆಕ್ಸ್ಟ್ ವಿಶೇಷ-ಈರಣ್ಣ ವಾಲಿಕಾರ
ಹುಬ್ಬಳ್ಳಿ- ಜೀವನದಲ್ಲಿ ಗುರಿ ಮುಟ್ಟುವ ಛಲ ಇದ್ದರೆ ಯಾವುದೇ ಅಡ್ಡಿ ಆತಂಕ ಬಂದರೂ ಸಹ ನಮ್ಮ ಧ್ಯೇಯವನ್ನು ತಲುಪಬಹುದು ಎಂಬುವುದಕ್ಕೆ ಈ ಮಹಿಳೆ ಸಾಕ್ಷಿಯಾಗಿದ್ದಾರೆ. ಮದುವೆಯಾದರೆ ಸಾಕು ಜೀವನ ಅರ್ಧ ಮುಗಿದಂತೆ ಎನ್ನುವ ಯುವತಿಯರಿಗೆ, ಈ ಮಹಿಳೆ ಸ್ಫೂರ್ತಿಯೇ ಸರಿ. ಅಷ್ಟಕ್ಕೂ ಈ ಮಹಿಳೆ ಯಾರು ಅಂತಿರಾ ಈ ಸ್ಟೋರಿ ನೋಡಿ ನೀವು ಭಾವುಕರಾಗುವುದು ಗ್ಯಾರೆಂಟಿ....
ಒಂದು ತಿಂಗಳಿನ ಮಗುವನ್ನು ತೊಟ್ಟಿಲಿನಲ್ಲಿ ತೂಗುತ್ತ, ಒಂದು ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುತ್ತಿರುವ ಈ ಮಹಿಳೆಯ ಹೆಸರು ವೈಶಾಲಿ ವೆಂಕಟೇಶ ಮೊರಬದ. ಹುಬ್ಬಳ್ಳಿಯ ಸೆಟ್ಲಿಮೆಂಟನ ದೊಡ್ಡಕೆರಿ ನಿವಾಸಿ.
ಇವರು ತನ್ನ ಒಂದು ತಿಂಗಳಿನ ಹಸುಕೂಸನ್ನು ಇಟ್ಟುಕೊಂಡು ಪರೀಕ್ಷೆ ಬರೆದು ಹಲವಾರು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ವೈಶಾಲಿ ಅವರು ಧಾರವಾಡ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಂತಿಮ ವರ್ಷದ ಪರೀಕ್ಷೆ ಪ್ರಾರಂಭವಾದ ಹಿನ್ನಲೆಯಲ್ಲಿ ವಿಭಾಗೀಯ ಮುಖ್ಯಸ್ಥರ ಜೊತೆ ಮಾತನಾಡಿಕೊಂಡು ಅನುಮತಿ ಪಡೆದು ಪರೀಕ್ಷೆ ಬರೆದಿದ್ದಾರೆ.
ವೈಶಾಲಿ ಅವರ ಓದಿಗಾಗಿ ತಾವು ಹೇಗೆ ಕಷ್ಟ ಪಡುತ್ತಾರೊ ಅದೇ ರೀತಿಯಾಗಿ ಕುಟುಂಬಸ್ಥರು ಕೂಡ ಅವರಿಗೆ ಸಾಥ್ ನೀಡಿ, ಅವರ ಗುರಿ ಮುಟ್ಟಲು ದಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ ವೈಶಾಲಿ ಅವರ ಮುಂದಿನ ಓದಿಗಾಗಿ ಎಷ್ಟೆ ಕಷ್ಟ ಬಂದರು ಕೂಡ, ಅವಳ ಜೊತೆ ಇದ್ದು, ಅವರ ಮುಂದಿನ ಗುರಿ ತಲುಪಲು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಗುರಿಯನ್ನು ತಲುಪಲು ಜೀವನದಲ್ಲಿ ಕಷ್ಟದೊಂದಿಗೆ ಒಂದು ತಿಂಗಳಿನ ಮಗುವನ್ನು ಇಟ್ಟುಕೊಂಡು ಪರೀಕ್ಷೆ ಬರೆದ ಇವರಿಗೆ ತಮ್ಮ ಮುಂದಿನ ಜೀವನದ ಗುರಿ ಆದಷ್ಟು ಬೇಗ ತಲುಪಲಿ ಎನ್ನುವುದು ನಮ್ಮೆಲ್ಲರ ಆಶಯ.
Kshetra Samachara
16/10/2020 04:44 pm