ಕುಂದಗೋಳ : ನಮಸ್ಕಾರ್ ರೀ ಸ್ವಾಮಿ, ಈ ಕೊರೊನಾ ಬಂದ್ ಮೇಲೆ ಸ್ಥಗಿತಗೊಂಡ ಚಟುವಟಿಕೆ ನಡುವೆ ಈ ಸಂತಿದೂ ಒಂದ್ ಕಥಿ, ನೋಡ್ರೀ ಮೊನ್ನೆ ಹೋದ ಬುಧವಾರ ಪಟ್ಟಣ ಪಂಚಾಯಿತಿ ಅವ್ರು ಬ್ಯಾಡ್ಯಾ ಅಂದ್ರು ತಾತ್ಕಾಲಿಕ ಆರಂಭವಾದ ಸಂತೀ ಇವತ್ತು ಭರ್ಜರಿ ನಡದೇತಿ ನೋಡ್ರಿಪಾ.
ಸರ್ಕಾರದಿಂದ ಇನ್ನೂ ಕುಂದಗೋಳ ಪಟ್ಟಣ ಪಂಚಾಯಿತಿಗೆ ಸಂತಿ ಚಾಲೂ ಮಾಡೋ ಬಗ್ಗೆ ಯಾವ್ದೇ ನೋಟಿಸ್ ಬಂದಿಲ್ಲ ಹಿಂಗಾಗಿ ಪಟ್ಟಣ ಪಂಚಾಯಿತಿ ಅವ್ರು ಸಂತಿ ಪ್ಯಾಟಿ ಚಾಲೂ ಮಾಡಬ್ಯಾಡ್ರಿ ಅಂತ ಬೆಳಿಗ್ಗೆ ಕಾರ್ಪೋರೇಶನ್ ಗಾಡಿ ಒಳಗೆ ಮೈಕ್ ಹಚ್ಚಿ ಊರೆಲ್ಲಾ ಸುತ್ತಾಡಿ ಹೇಳಿಹೋದ್ರು ಹಳ್ಳಿ ರೈತರು ಜಪ್ಪ್ ಅಂದಿಲ್ಲಾ ತಾವು ಸುಮ್ನ ಸಂತಿ ಚಾಲೂ ಮಾಡ್ಯಾರು ಮತ್ತು ಅತ್ತಾಗ ಇತ್ತಾನ ಜನರು ಸಂತಿಗೆ ಬರಾಕತ್ತಾರು.
ನಾವು ಹೀಂಗ್ ಸಂತಿ ಹಚ್ಚಿದ ರೈತರನ್ನ ಮಾತಾಡಸಿದ್ರ ಮನ್ಯಾಗ ಖಾಲಿ ಕುಂದ್ರಾಗ ಆಗಲ್ಲಾ ರೋಗ ಹೊಗೇತಿ ದುಡಿಮೆ ಬೇಕು ನಮಗ ಅಂತಾರ ಜನಾ ಯೋಚಿಸಿ ಬಾರ್, ರೆಸ್ಟೋರೆಂಟ್, ಸದ್ಯ ಸಿನಿಮಾ ಮಂದಿರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟರೀ ಮತ್ಯಾಕ ಸಂತಿ ಕೈ ಬಿಟ್ಟಿರಿ ಅಂತಾರು ಈ ಬಗ್ಗೆ ಸರ್ಕಾರನ ಚಿಂತಿ ಮಾಡಿ ಅವ್ರಿಗೆ ಉತ್ತರಾ ಕೊಡ್ಲಿ, ಈ ಸಂತಿ ಮಾತ್ರ ಕಾಯ್ದೆ ಇಲ್ಲಾ ಅಂದ್ರೂ ಅಗ್ದೀ ಖದರನ್ಯಾಗ ನಡದೈತಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನೀವೊಮ್ಮೆ ಸಂತಿ ನೋಡಿ ಬಿಡ್ರೀ.
Kshetra Samachara
14/10/2020 08:35 pm