ಪರಿಸರ ಪರಿಸರ ಕಾಳಜಿ ಮಾತು ದೂರವಾಗುತ್ತಿರೋ ಈ ದಿನಗಳಲ್ಲಿ ಜೂನ್ 5 ರ ವಿಶ್ವ ಪರಿಸರ ದಿನಕ್ಕೊಂದು ಗಿಡನೆಟ್ಟು ಪೋಟೋ ತೆಗೆಸಿಕೊಳ್ಳುವ ನಾವುಗಳು ನಿಜವಾದ ಪರಿಸರ ಕಾಳಜಿ ಮರೆತು ಮರ ಗಿಡಗಳ ನೆರಳು ಕಂಡಲ್ಲಿ ಓಡೋಗಿ ನಿಲ್ಲಲೂ, ಬೈಕ್ ಕಾರ್ ಪಾರ್ಕ್ ಮಾಡಲು ತಡಬಡಿಸುವ ಕಾಲಘಟ್ಟದಲ್ಲಿದ್ದು ಎಲ್ಲೇಡೆ ಕಾಂಕ್ರೀಟ್ ಕಾಡನ್ನು ನಿರ್ಮಿಸಿ ಪ್ಲಾಸ್ಟಿಕ್ ಬಳಕೆ ವಾಹನಗಳ ಹೊಗೆ ಮಾಲಿನ್ಯದಿಂದ ಶುದ್ಧ ಪರಿಸರ ದೂರಾಗಿದ್ದೆವೆ.
ಈ ಆಧುನಿಕ ಯುಗದಲ್ಲಿ ಇಲ್ಲೋಂದು ಹಳ್ಳಿಯ ಕಟ್ಟೆಯ ಮೇಲೆ ಕೂತು ಪ್ರಾಸ ಪ್ರಾಸ ಕೂಡುವಂತೆ ಪರಿಸರ ಉಳಿಸಿ ಬೆಳೆಸಿ ಎಂಬ ಅಂಶವನ್ನು ವೃದ್ಧರೊಬ್ಬರು ಹಳ್ಳಿಗರಿಗೆ ಸಾರಿದ್ದು ಸದ್ಯ ಊರು ವ್ಯಕ್ತಿ ಯಾರೆಂದು ಸ್ಪಷ್ಟವಾಗಿ ತಿಳಿಯದ ವಿಡಿಯೋದಲ್ಲಿ ಅಚ್ಚ ಕನ್ನಡದ ಪರಿಸರ ಕಾಳಜಿ ಮಾತುಗಳು ಮಾತ್ರ ಎಲ್ಲರ ಹೃದಯದ ತಟ್ಟಿದ್ದು ಎಲ್ಲೇಡೆ ವಿಡಿಯೋ ಸಖತ್ ವೈರಲ್ ಆಗುತ್ತಿದೆ ಆ ಮಾತಗಳನ್ನೊಮ್ಮೆ ನೀವು ಕೇಳಿ ಪರಿಸರ ಸಂರಕ್ಷಣೆಗೆ ಮುಂದಾಗಿ
Kshetra Samachara
12/10/2020 09:44 pm