ಹುಬ್ಬಳ್ಳಿ: ಸಂಗೀತ ಅಂದರೇ ಮನಸೋಲದ ಮನಸ್ಸುಗಳೇ ಇಲ್ಲ.ಭಜನಾ ಪದ,ಜನಪದ ಸಂಗೀತ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು ಇಂತಹ ಭಜನಾ ಪದ ಸಾಹಿತ್ಯದಲ್ಲಿ ಅಚ್ಚರಿಗೊಳ್ಳುವ ರೀತಿಯಲ್ಲಿ ಹುಬ್ಬಳ್ಳಿ ಕಲಾವಿದ ಸಾಧನೆ ಮಾಡಿದ್ದಾನೆ.
ಹುಬ್ಬಳ್ಳಿ ಭೈರಿದೇವರಕೊಪ್ಪದ ಸದಾನಂದ ವಾಲಿಕಾರ ಎಂಬುವವರೇ ಸಾವಿರಕ್ಕೂ ಹೆಚ್ಚು ಭಜನಾ ಪದಗಳನ್ನು ರಚಿಸಿದ್ದಾರೆ.ಅಲ್ಲದೇ ಧಾರ್ಮಿಕ, ಆಧ್ಯಾತ್ಮಿಕ, ಜಾನಪದ ಸಾಹಿತ್ಯದ ಕೃಷಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಮಾಂತ್ರಿಕ ಕಲಾವಿದ ಸದಾನಂದ ವಾಲಿಕಾರ.
ಹತ್ತು ಹಲವಾರು ನಾಟಕಗಳನ್ನು ರಚಿಸಿರುವ ಸದಾನಂದ ಅವರಿಗೆ ಪುರಸ್ಕಾರಗಳ ಮಹಾಪೂರವೇ ಹರಿದು ಬಂದಿದ್ದು,ಉತ್ತರ ಕರ್ನಾಟಕದ ಬಹುತೇಕ ಭಜನಾಪದ ಕಲಾವಿದರು ಇವರ ಶಿಷ್ಯರು ಎಂಬುವುದೇ ಇವರಿಗೆ ಹೆಮ್ಮೆಯ ವಿಷಯ.ಹೊಲದಲ್ಲಿ ಸಿಕ್ಕಿರುವ ಹಾರ್ಮೋನಿಯಂ ಮೂಲಕ ಭಜನಾ ಪದ ಸಾಹಿತ್ಯದ ಕೃಷಿ ಪ್ರಾರಂಭಿಸಿದ ಅವರು,ಇಂದು ಭಜನಾ ಪದದಲ್ಲಿ ಸಾಹಿತ್ಯ ಬ್ರಹ್ಮ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇಂದಿಗೂ ಆಟೋ ಚಾಲನೆ ಮಾಡುವ ಕಲಾವಿದ ಸಾಹಿತ್ಯ ರಚನೆಯ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಬೈಲಹೊಂಗಲದಿಂದ ಬಂಡಿಯ ತಂದೇನ ಎಂಬುವಂತ ಜನಪ್ರಿಯ ಭಜನಾ ಪದ ಬರೆದಿರುವ ಕೀರ್ತಿ ಸದಾನಂದ ವಾಲಿಕಾರ ಅವರಿಗೆ ಸಲ್ಲುತ್ತದೆ.
Kshetra Samachara
11/10/2020 12:30 pm