ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ದಿ. ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಗೀತ ಗಾಯನದ ಮೂಲಕ ನಮನ

ಕಲಘಟಗಿ:ತಾಲೂಕಿನ ಹುಲ್ಲಂಬಿ ಗ್ರಾಮದಲ್ಲಿ ಗಾನಕೋಗಿಲೆ ದಿ. ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರ ನೆನಪಿಗಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗ್ರಾಮದಲ್ಲಿ ನಾಗಲಿಂಗ ಸಾದರ ಅವರ ಓಂಕಾರ ಮೇಲೋಡಿಸ್ ಹಾಗೂ ಗ್ರಾಮದ ಯುವಕರಿಂದ ಇತ್ತೀಚಿಗೆ ಅಗಲಿದ ಎಸ್.ಪಿ ಬಾಲ ಸುಬ್ರಹ್ಮಣ್ಯಂ ಅವರ ಸವಿನೆನಪಿಗಾಗಿ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮವನ್ನು ರೈತ ಮುಖಂಡ ಬಿ. ಸಿ ಪಾಟೀಲ‌ ಉದ್ಘಾಟಿಸಿ ಮಾತನಾಡಿ ಸ್ವರ ಸಾಮ್ರಾಟ ಹಾಗೂ ಗಾನ ಗಂಧರ್ವ ಎಸ್ ಪಿ‌ ಬಿ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.ನಂತರ ಗಾಯಕರು ಎಸ್ ಪಿ ಬಿ ಅವರ ಹಾಡುಗಳನ್ನು ಹಾಡಿ ನಮನ ಸಲ್ಲಿಸಿದರು.

Edited By :
Kshetra Samachara

Kshetra Samachara

09/10/2020 03:28 pm

Cinque Terre

15.43 K

Cinque Terre

1

ಸಂಬಂಧಿತ ಸುದ್ದಿ