ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೃದಯಾಘಾತಕ್ಕೆ ವಾಯು ಮಾಲಿನ್ಯವೂ ಒಂದು ಕಾರಣ!

ಇತ್ತೀಚೆಗೆ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಜತೆಗೆ ಅನಗತ್ಯ ಮತ್ತು ಅತಿಯಾದ ವಾಹನಗಳ ಬಳಕೆಯಿಂದ ವಾಯು ಮಾಲಿನ್ಯವೂ ಹೆಚ್ಚಾಗುತ್ತಿದೆ. ಇದರ ಪರಿಣಾಮ ಜನರ ಹೃದಯದ ಆರೋಗ್ಯದ‌ ಮೇಲೂ ಆಗುತ್ತಿದೆ ಎಂದು ಧಾರವಾಡದ ಎಸ್‌ಡಿಎಮ್ ನಾರಾಯಣ ಹೃದಯಾಲಯದ ಖ್ಯಾತ ವೈದ್ಯ ಡಾ. ಶಾಕಾಪುರ್ ಚೌಡಪ್ಪ ಅವರು ಹೇಳಿದ್ದಾರೆ.

ಜಾಗತಿಕ ಹೃದಯ ದಿನದ ಅಂಗವಾಗಿ ತೋಡಾ ದಿಲ್ ತೋಡಾ ಹಾರ್ಟ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನರಿಗೆ ಹೃದಯದ ಆರೋಗ್ಯ ಸಲಹೆ ನೀಡಿರುವ ಡಾ. ಶಾಕಾಪುರ ಚೌಡಪ್ಪ, ಬೈಕ್, ಕಾರು ಇತರ ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸಬೇಕು. ಇದರಿಂದ ನಮ್ಮ ಪರಿಸರದ ವಾತಾವರಣ ನಮಗೆ ಪೂರಕವಾಗುತ್ತದೆ. ಜತೆಗೆ ಪೇಪರ್‌ಗಾಗಿ ಗಿಡ ಮರಗಳನ್ನು ಕಡಿಯದೇ ಎಲ್ಲವನ್ನೂ ಕಾಗದ ರಹಿತ ಡಿಜಿಟಲೀಕರಣ ಮಾಡಬೇಕಿದೆ. ಇದರಿಂದ ಅರಣ್ಯ ಉಳಿದು ನಮಗೆ ಉತ್ತಮ ಗಾಳಿ ದೊರೆಯಲಿದೆ. ಹೀಗಾಗಿ ಪರಿಸರ ಉಳಿಸುವ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಿ ಎಂದು ಡಾ. ಶಾಕಾಪುರ ಚೌಡಪ್ಪ ಕಿವಿಮಾತು ಹೇಳಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

30/09/2022 12:33 am

Cinque Terre

43.79 K

Cinque Terre

1

ಸಂಬಂಧಿತ ಸುದ್ದಿ