ಸದ್ಯ ರಾಜ್ಯಾದ್ಯಂತ ಧರ್ಮ ದಂಗಲ್ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದೆ. ಆದರೆ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಅಣ್ಣ-ತಮ್ಮಂದಿರಂತೆ ಪಾಲ್ಗೊಂಡಿದ್ದು ನೋಡಿದರೇ ಅದುವೇ ನಮ್ಮ ಭಾವೈಕ್ಯತೆಯ ಭಾರತ ಎಂಬುದನ್ನು ತೋರಿಸುವ ದೃಶ್ಯ ಕಂಡು ಬಂದಿತು.
ಹೌದು. ಹಾದಿ ಎಜ್ಯುಕೇಶನಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ, ಹುಬ್ಬಳ್ಳಿಯ ಗೌಸಿಯಾ ನಗರದ ರಜಿಯಾಟೌನ್‌ನಲ್ಲಿರುವ ಹಾದಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಈ ಶಿಬಿರದಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ದೇವರು ಒಬ್ಬನೇ ನಾಮ ಹಲವು ಎಂಬ ತತ್ವವನ್ನು ಅಳವಡಿಸಿಕೊಂಡಿರುವ ಈ ಸ್ಲಂ ಜನತೆ ಯಾವುದೇ ಬೇಧ-ಭಾವವಿಲ್ಲದೇ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ, ರಕ್ತದೊತ್ತಡ, ಶುಗರ್ ಪರೀಕ್ಷೆ ಮಾಡಲಾಯಿತು. ಸಾಕಷ್ಟು ಜನರು ಪಾಲ್ಗೊಂಡು ನುರಿತ ವೈದ್ಯರಿಂದ ತಪಾಸಣೆ ಪಡೆದು ಉಚಿತ ಔಷಧಿಗಳನ್ನು ಪಡೆದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/09/2022 01:23 pm