ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಣಕ್ಕಿಂತ ಆರೋಗ್ಯ ರಕ್ಷಣೆ ಅತ್ಯಂತ ಮುಖ್ಯ; ಡಾ. ರವಿ ಜೈನಾಪುರ ಅಭಿಪ್ರಾಯ

ಹುಬ್ಬಳ್ಳಿ: ಕೇವಲ ಹಣ ನೀಡಿದರೆ ಆರೋಗ್ಯ ಸಿಗದು ಹೀಗಾಗಿ ಹಣಕ್ಕಿಂತ ಆರೋಗ್ಯ ರಕ್ಷಣೆ ಅತ್ಯಂತ ಮುಖ್ಯ ರೋಗ ಉಲ್ಬಣಕ್ಕೂ ಮೊದಲೆ ವೈದ್ಯರ ಸಲಹೆ ಮೇರೆಗೆ ಸಮಯಕ್ಕೆ ಸರಿಯಾಗಿ ಔಷದೋಪಚಾರ ಮಾಡಿಕೊಂಡಲ್ಲಿ ಖಾಯಿಲೆಗಳನ್ನು ದೂರ ಮಾಡಬಹುದು ಎಂದು ಎಸ್.ಡಿ. ಎಮ್. ನಾರಾಯಣ ಹಾರ್ಟ ಸೆಂಟರನ ಹೃದಯ ರೋಗ ತಜ್ಞ ವೈದ್ಯರಾದ ಡಾ. ರವಿ ಜೈನಾಪುರ ರವರು ಅಭಿಪ್ರಾಯಪಟ್ಟರು.

ಇನಾಮಹೊಂಗಲದ ಡಾ.ಪಕ್ಕಿರಶೆಟ್ಟಿ ರವರ ಆಸ್ಪತ್ರೆ ಹಾಗೂ ಎಸ್.ಡಿ.ಎಮ. ನಾರಾಯಣ ಹಾರ್ಟ ಸೆಂಟರ್ ವತಿಯಿಂದ ಏರ್ಪಡಿಸಿದ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ತಮ್ಮ ನಿರ್ಲಕ್ಷದಿಂದ ವಿವಿಧ ಖಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಅವಶ್ಯ ಈ ಕುರಿತು ಹಲವಾರು ಶಿಬಿರಗಳನ್ನು ಆಯೋಜನೆ ಮಾಡಿ ಜೊತೆಗೆ ತಜ್ಞ ವೈದ್ಯರ ಸಲಹೆ ಕೋಡಿಸುವ ಕೆಲಸ ಹೆಚ್ಚಾಗಬೇಕಿದೆ. ಮನುಷ್ಯ ತನ್ನ ಆರೋಗ್ಯದ ಬಗ್ಗೆ ಯಾವುದೆ ತರಹದ ಮುಂಜಾಗ್ರತೆ ವಹಿಸುತ್ತಿಲ್ಲ ಹೀಗಾಗಿ ರೋಗಕ್ಕೆ ಸಿಲುಕುತ್ತಿದ್ದಾರೆ. ಸಾತ್ವಿಕ ಆಹಾರ ಬಳಸದೆ ಕೇವಲ ಜಂಕ್ ಫುಡ್‌ಗಳಿಗೆ ಮಾರು ಹೋಗಿ ಆರೋಗ್ಯದೆಡೆ ನಿರ್ಲಕ್ಷ ಮಾಡುವುದು ಸರಿಯಲ್ಲ ಎಂದರು.

ಡಾ.ಎಸ ಎಮ ಪಕ್ಕಿರಶೆಟ್ಟಿರವರು ಮಾತನಾಡಿ, ಓದು, ಬರಹ, ಹಾಗೂ ಪಠ್ಯ ಚಟುವಟಿಕೆಗಳಲ್ಲಿ ನಾವು ತೊಡಗಿಸಿಕೊಂಡರೆ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಮುನ್ನಡೆಯಾಗುತ್ತದೆ. ಇಂದಿನ ಆಧುನಿಕ ವಿದ್ಯುನ್ಮಾನ ಯುಗದಲ್ಲಿ ಮನರಂಜನೆಯ ಹಲವಾರು ಮಾಧ್ಯಮಗಳು ನಮ್ಮನ್ನು ಒಂದೇ ಕಡೆ ಕೂಡಿಸಿ ನಮ್ಮಲ್ಲಿ ಜಡತ್ವ ಆಲಸಿತನದಂತಹ ಬೇಡವಾದ ಅಂಶಗಳನ್ನು ಪರೋಕ್ಷವಾಗಿ ತುಂಬುತ್ತಿವೆ. ಶಹರದ ಜೀವನವು ಯಾಂತ್ರಿಕ ಬದುಕಾಗಿದ್ದು ಇದರಿಂದ ಹೊರ ಬರಲು ಯೋಗ, ವ್ಯಾಯಾಮ ಹಾಗೂ ನಡಿಗೆಯನ್ನು ಅಳವಡಿಸಿಕೊಂಡು ರೋಗದಿಂದ ದೂರವಿರಬೇಕು ಎಂದರು.

ಡಾ. ವಿನೋದ ಪಕ್ಕಿರಶೆಟ್ಟಿ , ಮಾಜಿ ತಾಲೂಕ ಪಂಚಾಯತ ಸದಸ್ಯರಾದ ವೀರಭದ್ರಪ್ಪ ಪಟ್ಟಣಶೆಟ್ಟಿ, ನಾರಯಣ ಹಾರ್ಟ್ ಸಂಟರ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ದುಂಡೇಶ ತಡಕೋಡ, ಡಾ. ರೂಪಾ ಗುರುಪಟ್ರೆಯನವರ್ , ನಿಂಗಪ್ಪ ಬಡ್ನಿ ಹಾಗೂ ನಾರಾಯಣ ಹಾರ್ಟ್ ಸೆಂಟರ್ ನ ಸಿಬ್ಬಂದಿಗಳು ಉಪಸ್ತಿತರಿದ್ದರು. ಶಿಬಿರಲ್ಲಿ ೨೦೦ ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

Edited By : Abhishek Kamoji
Kshetra Samachara

Kshetra Samachara

07/09/2022 04:20 pm

Cinque Terre

18.21 K

Cinque Terre

0

ಸಂಬಂಧಿತ ಸುದ್ದಿ