ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಂದ ಬೃಹತ್ ರಕ್ತದಾನ ಶಿಬಿರ

ಹುಬ್ಬಳ್ಳಿ: ಸ್ವಾತಂತ್ರ ಸೇನಾನಿ ದೇಶಭಕ್ತ ಸಂಗೊಳ್ಳಿ ರಾಯಣ್ಣ ಎಂದರೆ ಒಂದು ಹುಮ್ಮಸ್ಸು. ಒಂದು ಶಕ್ತಿ ಇದ್ದಂತೆ, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಸಂಗೊಳ್ಳಿ ರಾಯಣ್ಣನನ್ನು ದೈವಾಂಶ ಶಕ್ತಿ ಎಂದು ನಂಬಲಾಗುತ್ತಿದೆ.ಇಂತಹ ರಾಯಣ್ಣನ ಹುಬ್ಬಳ್ಳಿ ಅಭಿಮಾನಿಗಳು ಇಂದು ವಿಶಿಷ್ಟವಾಗಿ ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ರಕ್ತದಾನ ಮಾಡುವ ಮೂಲಕ ಆಚರಣೆ ಮಾಡಿದ್ದಾರೆ.

ಹೌದು,ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಸುಮಾರು 1,500 ಯುವಕರು, ಮುಂಜಾನೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೂ ರಕ್ತದಾನ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೊರೊನಾ ನಂತರ ಉದ್ಭವಹಿಸಿರುವ ರಕ್ತನಿಧಿ ಕೊರತೆ ನೀಗಿಸಲು ಹುಬ್ಬಳ್ಳಿ ರಾಷ್ಟ್ರೋತ್ತಾನ ರಕ್ತನಿಧಿ ಕೇಂದ್ರ, ಸಾಕಷ್ಟು ಬಾರಿ ರಕ್ತ ದಾನ ಮಾಡುವಂತೆ ಮನವಿ ಮಾಡಿತ್ತು. ಇದನ್ನ ನೀಗಿಸುವ ಉದ್ದೇಶದಿಂದ ಸುರೇಶ್ ಗೋಕಾಕ್ ಮತ್ತು ತಂಡ ತಮ್ಮ ಸಂಗೊಳ್ಳಿ ರಾಯಣ್ಣನ ಅನುಯಾಯಿ ಪಡೆಯನ್ನ ಸಣ್ಣದ್ದುಗೊಳಿಸಿ, ಇಂದು ಒಂದೇ ದಿನ ಬರೋಬ್ಬರಿ 1,500 ಯೂನಿಟ್ ರಕ್ತದಾನ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ.

ಸರಳವಾಗಿವಾಗಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪ್ರಸಾದ್ ಅಬ್ಬಯ್ಯ ಹಾಗೂ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

07/08/2022 09:48 pm

Cinque Terre

35.78 K

Cinque Terre

1

ಸಂಬಂಧಿತ ಸುದ್ದಿ