ಹುಬ್ಬಳ್ಳಿಯಲ್ಲಿ ಯಶಸ್ವಿ ಉಚಿತ ಆರೋಗ್ಯ ಶಿಬಿರ
ಹುಬ್ಬಳ್ಳಿ : ನೆರೆಹೊರೆಯವರನ್ನು ಒಗ್ಗೂಡಿಸುವ ಧ್ಯೇಯವಾಕ್ಯವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿರುವ ನಿಮ್ಮ PublicNext ಮಾಧ್ಯಮ, ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವಲ್ಲಿಯೂ ಹಿಂದೆ ಬಿದ್ದಿಲ್ಲ. ಭಾನುವಾರ ಹುಬ್ಬಳ್ಳಿ ಲೋಕಪ್ಪನ ಹಕ್ಕಲದಲ್ಲಿರುವ ಸುಧರ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಾಕ್ಷಿಯಾಗಿತ್ತು.
PublicNext ಮಾಧ್ಯಮದ ಈ ಸಮಾಜಮುಖಿ ಕಾರ್ಯಕ್ಕೆ ಸಹಕಾರ ಸಹಯೋಗ ನೀಡಿದವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉತ್ಸಾಹಿ ಕಾರ್ಪೊರೇಟರ್ ಶ್ರೀಮತಿ ರೂಪಾ ದಯಾನಂದ ಶೆಟ್ಟಿ . ಪಾಲಿಕೆ ಎಲ್ಲ ಸದಸ್ಯರು ತಮ್ಮ ವಾರ್ಡಿನ ಸಮಸ್ಯೆಗಳಿಗೆ ಸ್ಪಂದಿಸುವುದು ಸಹಜ. ಆದರೆ ಅದರೊಂದಿಗೆ ಅಲ್ಲಿಯ ಅಬಾಲವೃದ್ಧರ ಆರೋಗ್ಯದ ಬಗ್ಗೆ ತೋರಿದ ಕಳಕಳಿ ಇತರರಿಗೂ ಮಾದರಿ ಎನ್ನಬಹುದು.
ಈ ಉಚಿತ ಆರೋಗ್ಯ ಶಿಬಿರವು ಕೆಲವೇ ನಿರ್ದಿಷ್ಟ ರೋಗಗಳ ತಪಾಸಣೆಗೆ ಸೀಮಿತವಾಗಿರಲಿಲ್ಲ, ಹೃದಯದಂತಹ ಗಂಭೀರ ಕಾಯಿಲೆಗಳ ತಪಾಸಣೆ, ಕೌನ್ಸಿಲಿಂಗ್ ನಡೆಸಲಾಯಿತು.
ಬನ್ನಿ ನಮ್ಮ ಮಾಧ್ಯಮದ ಮೂಲಕವೇ ವ್ಯವಸ್ಥಿತ ಶಿಬಿರದ ಝಲಕ್ ನೋಡೋಣ.
ಹುಬ್ಬಳ್ಳಿಯ ಪ್ರತಿಷ್ಠಿತ ವಿಹಾನ್ ಹಾರ್ಟ್ ಕೇರ್ ಸೆಂಟರ್ ದಿಂದ ಇಸಿಜಿ, ಬಿಪಿ, ಶುಗರ್ ತಪಾಸಣೆ ನಡೆಸಲಾಯಿತು. ಖ್ಯಾತ ಹೃದಯ ತಜ್ಞ ವಿಯಜಕೃಷ್ಣ ಕೋಳೂರ್, ಪಿಡಿಯಾಟ್ರಿಕ್ ಆರ್ಥೋಪೆಡಿಕ್ ತಜ್ಞ ಡಾ: ನವೀನ್ ಪಾಟೀಲ್, ಆನ್ಕಾಲಾಜಿಸ್ಟ್ & ಹೆಮ್ಟೋ ಆನ್ಕಾಲಾಜಿಸ್ಟ್ ಡಾ: ವಿಶಾಲ್ ಕುಲಕರ್ಣಿ, ಜಾಯದೆ ಮಲ್ಟಿಸ್ಪೇಶಾಲಿಟಿ ಡೆಂಟಲ್ ಕೇರ್ ದ ಡಾ: ಚೇತನ್ ಜಾಯದೆ ಹಾಗೂ ವೈದ್ಯರ ತಂಡ ದಂತ ತಪಾಸಣೆ, ಐ ದೃಷ್ಟಿ ಹಾಸ್ಪಿಟಲ್ ವತಿಯಿಂದ ಡಾ: ಶಿಲ್ಪಾ ಬಿ.ಕೆ ಹಾಗೂ ಅವರ ತಂಡ ನೇತ್ರ ತಪಾಸಣೆ, ಕಾಂಚನಾ ಹಿಯಿರಂಗ್ ವತಿಯಿಂದ ಚೀಫ್ ಆಡಿಯೊಲಾಜಿಸ್ಟ್ ಡಾ: ರೇಮ್ಯಾ ರವಿ ಹಾಗೂ ಅವರ ತಂಡ ಶ್ರವಣ ತಪಾಸಣೆ, ಚರ್ಮರೋಗ ತಜ್ಞೆ ಡಾ: ಶ್ರೀಮತಿ ಸವಿತಾ ರಾಯಚೂರ , ಸ್ತ್ರೀರೋಗ ತಜ್ಞೆ ಡಾ: ಪೂಜಾ ಪಾಟೀಲ್, ಯೂರಾಲಾಜಿಸ್ಟ್ ಡಾ: ಪವನ್ ಜೋಷಿ , ಪಲ್ಮಾಲಾಜಿಸ್ಟ್ ಡಾ: ಕಿರಣ್ ನಿಲುಗಲ್ , ಐವಿಎಫ್ ತಜ್ಞೆ ಡಾ: ವಿದ್ಯಾ ಹೊನವಾಡ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ೨೦೦ ಕ್ಕೂ ಹೆಚ್ಚು ಪಾಲ್ಗೊಂಡು ಜನ ಪಾಲ್ಗೊಂಡು ಸಂಪೂರ್ಣ ಶರೀರದ ತಪಾಸಣೆಗೊಳಗಾಗಿ ವೈದ್ಯರ ಸಲಹೆ ಪಡೆದರು. ಆರಂಭದಲ್ಲಿ ಪಾಲಿಕೆಯ ಪೌರಕಾರ್ಮಿಕರು ತಂಡ ತಂಡವಾಗಿ ಬಂದು ಅರೋಗ್ಯ ತಪಾಸಣೆ ಮಾಡಿಸಿಕೊಂಡರು.
೫ ವರ್ಷದ ಮಕ್ಕಳಿಂದ ೮೦ ವರ್ಷದ ವೃದ್ಧರು ವಿವಿಧ ವಿಭಾಗಗಳಲ್ಲಿ ತಪಾಸಣೆಗೊಳಗಾಗಿದ್ದು ವಿಶೇಷವಾಗಿತ್ತು. ಒಂದೇ ಸೂರಿನಡಿ ಬಹುತೇಕ ಎಲ್ಲ ರೋಗಗಳ ತಪಾಸಣೆ ವ್ಯವಸ್ಥೆ ಮಾಡಿದ್ದನ್ನು ಸಾರ್ವಜನಿಕರು ಪ್ರಶಂಸಿಸಿದರು.ಪಾಲಿಕೆ ಸದಸ್ಯೆ ಶ್ರೀಮತಿ ರೂಪಾ ಶೆಟ್ಟಿ ಹಾಗೂ ಅವರ ಉತ್ಸಾಹಿ ಕಾರ್ಯಕರ್ತರ ತಂಡ PublicNext ಮಾಧ್ಯಮದ ಆರೋಗ್ಯ ಅಭಿಯಾನಕ್ಕೆ ಬೆನ್ನೆಲುಬಾಗಿ ನಿಂತು ಶ್ರಮಿಸಿದರು.
ನಿಮ್ಮ PublicNext ಮಾಧ್ಯಮ ಅವಳಿ ನಗರದ ೮೨ ವಾರ್ಡುಗಳಲ್ಲಿಯೂ ಈ ರೀತಿ ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ. ಈಗಾಗಲೇ ಅನೇಕ ಕಾರ್ಪೊರೇಟರ್ ಹಾಗೂ ಕೆಲವು ಧುರೀಣರು ಶಿಬಿರಕ್ಕೆ ಕೈ ಜೋಡಿಸಲು ಮುಂದಾಗಿದ್ದಾರೆ. ಯಾವುದೇ ಸಂಘ ಸಂಸ್ಥೆ ಈ ರೀತಿ ಸಮಾಜ ಮುಖಿ ಕಾರ್ಯಕ್ಕೆ ಸಹಯೋಗ ಸಹಕಾರ ನೀಡುವುದಾದರೆ ಸ್ವಾಗತ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/07/2022 10:18 pm