ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 'ಆಹಾರ ವಿಹಾರ ಪದ್ಧತಿಯನ್ನು ಸರಿಯಾಗಿ ಅನುಸರಿಸಬೇಕು'

ಧಾರವಾಡ: ಮನುಷ್ಯ ತನ್ನ ಆರೋಗ್ಯದ ಬಗ್ಗೆ ಯಾವುದೇ ತರಹದ ಮುಂಜಾಗ್ರತೆವಹಿಸುತ್ತಿಲ್ಲ. ಹೀಗಾಗಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ ಎಂದು ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ದುಂಡೇಶ ತಡಕೋಡ ಹೇಳಿದ್ದಾರೆ.

ಅಮ್ಮಿನಭಾವಿಯಲ್ಲಿಂದು ಎಸ್‌ಡಿಎಂ ನಾರಾಯಣ ಹಾರ್ಟ್‌ ಸೆಂಟರ್ ವತಿಯಿಂದ ಏರ್ಪಡಿಸಿದ್ದ ಬಿ.ಬಿ, ಸಕ್ಕರೆ ಖಾಯಿಲೆ, ಈಸಿಜಿ, ಹೃದಯ ರೋಗ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 'ನಾವು ನಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಅವಶ್ಯ. ಕಾಲಕ್ಕೆ ಅನುಗುಣವಾಗಿ ತಜ್ಞ ವೈದ್ಯರನ್ನು ಸಂಪರ್ಕಿಸುವ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಜೀವನ ಶೈಲಿಯಲ್ಲಿ ಅತ್ಯುತ್ತಮ ಬದಲಾವಣೆ ಬಯಸಿದಾಗ ಮಾತ್ರ ನಾವು ಆರೋಗ್ಯದಿಂದಿರಲು ಸಾಧ್ಯ. ಈ ನಿಟ್ಟಿನಲ್ಲಿ ಶಿಬಿರ ಆಯೋಜನೆ ಮಾಡಿದ್ದು ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಅಮೃತ್ ದೇಸಾಯಿ ಗೆಳೆಯರ ಬಳಗದ ಅಧ್ಯಕ್ಷ ರುದ್ರಪ್ಪ ಯಲಿವಾಳ ಅಧ್ಯಕ್ಷತೆವಹಿಸಿ ಮಾತನಾಡಿ, ಒತ್ತಡದ ಜೀವನದಲ್ಲಿ ಸಿಲುಕಿರುವ ಮನುಷ್ಯ ತನ್ನ ಆರೋಗ್ಯದ ಬಗ್ಗೆ ಯಾವುದೆ ತರಹದ ಮುಂಜಾಗ್ರತೆ ವಹಿಸುತ್ತಿಲ್ಲ ಹೀಗಾಗಿ ಹೃದಯ ರೋಗ ಮತ್ತು ಹೃದಯಾಘಾತಕ್ಕೆ ಸಿಲುಕುತ್ತಿದ್ದಾರೆ. ಹೃದಯ ರೋಗದಿಂದ ದೂರವಿರಲು ಜನರು ತಮ್ಮ ನಿತ್ಯ ಜೀವನದಲ್ಲಿನ ಆಹಾರ ವಿಹಾರ ಪದ್ದತಿಯನ್ನು ಸರಿಯಾದ ಕ್ರಮ ಅನುಸರಿಸಬೇಕು, ಮಾನಸಿಕ ದೃಢತೆ ಹೆಚ್ಚಿಸುವ ಧ್ಯಾನ ಪ್ರಾರ್ಥನೆ ಮಾಡಿ ತರಕಾರಿ, ಹಣ್ಣು ಸಾತ್ವಿಕ ಆಹಾರ ತೆಗೆದುಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ. ಶಿವಾನಂದ ಹದಗಲ, ಸಂಬಾಜಿ ಜಾಧವ್, ಯಲ್ಲಪ್ಪ ಜನತ್ತನವರ್, ನಾಗಪ್ಪ ಗಾಣಿಗೇರ, ಶಂಕರಣ್ಣ ಮುಗದ, ಸಂಗನಗೌಡ ರಮನಗೌಡರ್, ಸುನಿಲ್ ಗುಡಿ, ಡಾ. ಈರಣ್ಣ ಭಾವಿಕಟ್ಟಿ, ನಿಂಗಪ್ಪ ಮಾದಿಗೊಂದ, ಜಗದೀಶ್ ಕುಸುಗಲ್, ವಸಂತ್ ಪದಕಿ, ನಾಗಪ್ಪ ತಿರ್ಲಪೂರ, ಮೌನೇಶ್ ಪತ್ತಾರ್, ಎಂಸಿ ಹುಲ್ಲೂರ, ಮಹೇಶ ಯಲಿಗಾರ, ಮಂಜುನಾಥ ಹಿರೇಮಠ್, ಮಹಾಂತೇಶ್ ದತ್ತುಣವರ್, ಈರಣ್ಣ ಪಾಟೀಲ, ಭೀಮ ಕಾಶಿ, ಮಂಜುನಾಥ ಕರ್ಕಿ ಇತರರು ಉಪಸ್ಥಿತರಿದ್ದರು. ಶಿಬಿರದಲ್ಲಿ 300ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

Edited By : Vijay Kumar
Kshetra Samachara

Kshetra Samachara

17/07/2022 06:54 pm

Cinque Terre

13.09 K

Cinque Terre

0

ಸಂಬಂಧಿತ ಸುದ್ದಿ