ಹುಬ್ಬಳ್ಳಿ: ವಿಶ್ವ ಯೋಗದಿನದ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಶಿಬಿರಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಸಾವಿರಾರು ಜನ ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನಕ್ಕೆ ಹೊಸ ಮೆರಗನ್ನು ತಂದರು.
ಇನ್ನೂ ಯೋಗ ದಿನಾಚರಣೆಯಲ್ಲಿ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಧರಣೆಪ್ಪನವರ ಜವಳಿ, ರಾಜ್ಯ ಯೋಗದಿನ ಸಂಚಾಲಕ ಲಿಂಗರಾಜ ಪಾಟೀಲ ಮತ್ತಿತರರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಆಚರಣೆ ಮಾಡಲಾಯಿತು.
Kshetra Samachara
21/06/2022 08:31 am