ಹುಬ್ಬಳ್ಳಿ: ವಿಶ್ವ ಯೋಗದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ಪಿರಾಮಿಡ್ ಧ್ಯಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಯೋಗ ಶಿಬಿರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದಿದ್ದಾರೆ.
ಸಿದ್ಧಾರೂಢ ಮಠ, ಇಂದಿರಾ ಗಾಂಧಿ ಗ್ಲಾಸ್ ಹೌಸ್ ನಲ್ಲಿ ಹಾಗೂ ಪಿರಮಿಡ್ ಧಾನ್ಯ ಕೇಂದ್ರದಲ್ಲಿ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಯೋಗ ದಿನ ಆಚರಣೆ ಮಾಡಲಾಯಿತು. ಕುಟುಂಬಸ್ಥರು ಮತ್ತು ಸಾರ್ವಜನಿಕರ ಜೊತೆಗೆ ಯೋಗ ಮಾಡಿದ ಜಗದೀಶ್ ಶೆಟ್ಟರ್ ವಿಶ್ವ ಯೋಗ ದಿನಕ್ಕೆ ಚಾಲನೆ ನೀಡಿದರು.
Kshetra Samachara
21/06/2022 08:17 am