ಹುಬ್ಬಳ್ಳಿ: ಮನುಷ್ಯನ ಜೀವನದಲ್ಲಿ ಎಲ್ಲವೂ ಕೂಡ ಸರಿಯಾಗಿರಲು ಸಾಧ್ಯವಿಲ್ಲ. ಒಂದಿಲ್ಲೊಂದು ಸಮಸ್ಯೆಗಳಿಂದ ಮನುಷ್ಯನ ಬದುಕು ಹೂವಿನ ದಾರಿಯಾಗದೇ ಮುಳ್ಳಿನ ಕವಲು ದಾರಿಯಾಗಿರುತ್ತದೆ. ಆದರೆ ಕೆಲವೊಂದು ಜನರಲ್ಲಿ ನಮ್ಮ ಹಣೆಬರಹವೇ ಸರಿಯಿಲ್ಲ ಎಂಬುವಂತ ಮೂಢನಂಬಿಕೆ ಮನೆ ಮಾಡಿರುತ್ತದೆ. ಹಾಗಿದ್ದರೇ ನಿಮ್ಮ ಜೀವನದಲ್ಲಿ ಹೊಸ ಚೈತನ್ಯಕ್ಕೆ ನಿಮ್ಮ ಹೆಸರಿನಲ್ಲಿದೆ. ಅದ್ಭುತವಾದ ಶಕ್ತಿ ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ತೋರಸ್ತೀವಿ ನೋಡಿ...
ನಾವೆಲ್ಲರೂ ಅಂದುಕೊಂಡಿರುವಂತೆ ಜ್ಯೋತಿಷ್ಯ ಶಾಸ್ತ್ರ ಒಂದು ವಿಜ್ಞಾನ ಅಂತ. ಈಗ ನಿಮಗೆ ಮತ್ತೊಂದು ಶಾಸ್ತ್ರದ ಪರಿಚಯವನ್ನು ಮಾಡಲೇ ಬೇಕು. ಅದೇ ನಮ್ಮ ಅಕ್ಷರಶಾಸ್ತ್ರ. ಹೌದು.. ಮೂಲತಃ ಉಡುಪಿಯ ಎ.ದಯಾನಂದ ಕೊಟ್ಯಾನ್ ಅವರು ಸಂಶೋಧನೆ ಮಾಡಿರುವ ಈ ಅಕ್ಷರಶಾಸ್ತ್ರ. ನಿಮ್ಮ ಬದುಕಿನಲ್ಲಿ ಸಂಭವಿಸಿದ ಕಷ್ಟದ ದಿನಗಳು ಹಾಗೂ ನಿಮ್ಮ ಭವಿಷ್ಯದ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಅಕ್ಷರಶಾಸ್ತ್ರದ ಮೂಲಕ ಪರಿಹಾರ ನೀಡಲಿದ್ದಾರೆ. ಹಾಗಿದ್ದರೇ ಈ ಅಕ್ಷರಶಾಸ್ತ್ರದ ಬಗ್ಗೆ ಅವರ ಮಾತನ್ನೊಮ್ಮೆ ಕೇಳಿ ಬಿಡಿ...
1989ರಲ್ಲಿಯೇ ತಮ್ಮ 17ನೇ ವಯಸ್ಸಿನಲ್ಲಿ ಹುಬ್ಬಳ್ಳಿಗೆ ಆಗಮಿಸಿ ಹೊಟೇಲ್ ನಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಜೀವನವನ್ನು ಪ್ರಾರಂಭಿಸಿದ ಎ.ದಯಾನಂದ ಅವರು, ಬಿಎ ಪದವಿಯನ್ನು ಪಡೆದು ಹಲವಾರು ಸಾಮಾಜಿಕ ಹೋರಾಟ ಮಾಡುವ ಮೂಲಕ ತಮ್ಮನ್ನು ಹುಬ್ಬಳ್ಳಿಯಲ್ಲಿ ಗುರುತಿಸುವಂತೆ ಮಾಡಿದ್ದರು. ಆದರೆ ಅಕ್ಷರಶಾಸ್ತ್ರದ ಸಂಶೋಧನೆ ಮೂಲಕ ಇಂದು ದೇಶವೇ ಅವರನ್ನು ಗುರುತಿಸುವಂತೆ ಮಾಡಿದೆ. ಅಲ್ಲದೇ ಸುಮಾರು 11,000 ಕುಟುಂಬಗಳಿಗೆ ಅಕ್ಷರಶಾಸ್ತ್ರದ ಮೂಲಕ ಸಲಹೆ ನೀಡಿದ್ದಾರೆ. ಸಲಹೆ ಬಗ್ಗೆ ಅವರ ಬಾಯಿಂದಲೇ ಕೇಳಿ.
ಅಕ್ಷರಶಾಸ್ತ್ರವನ್ನು ಹಣದ ಗಳಿಕೆಗಾಗಿ ಬಳಸಿಕೊಳ್ಳದೇ ಜನರ ಹೆಸರಿನಿಂದ ಅವರ ಜೀವನದಲ್ಲಿ ಆಗುತ್ತಿರುವ ಹಾನಿಗಳನ್ನು ತಪ್ಪಿಸಲು ಸೂಕ್ತ ರೀತಿಯಲ್ಲಿ ಪರಿಹಾರವನ್ನು ನೀಡುತ್ತಿದ್ದಾರೆ. ಅಲ್ಲದೇ ಯಾರ ಹೆಸರನ್ನು ಬದಲಾಯಿಸದೇ ಹೆಸರಿನ ಅಕ್ಷರದಲ್ಲಿ ಮತ್ತೊಂದು ಧನಾತ್ಮಕ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ.
ಎ.ದಯಾನಂದ ಕೊಟ್ಯಾನ್
MO: +91 90360 40479
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/06/2022 02:10 pm