ನವಲಗುಂದ : ಬುಧವಾರ ನವಲಗುಂದ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 3 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ನವಲಗುಂದ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 3 ನವಲಗುಂದ ಇವರು ಆಯೋಜಿಸಿರುವ ಯೋಗ ಸಪ್ತಾಹ ಕಾರ್ಯಕ್ರಮದ ಮೊದಲ ದಿನ ಶಿವಯೋಗಿ ಜಂಗಣ್ಣವರ ಪ್ರಾರಂಭಿಕ ವ್ಯಾಯಾಮ ಸರಳ ಯೋಗಾಸನಗಳನ್ನು ಮಾಡಿಸಿದರು.
ಶ್ರೀಧರ ಜೋಶಿ, ಆರ್ ಬಿ ಹಳ್ಳಿಕೇರಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಪ್ರಧಾನ ಗುರುಗಳಾದ ಎನ್ ಎನ್ ಹಾಲಿಗೇರಿ, ಕಸಾಪ ಅಧ್ಯಕ್ಷ ಎಸ್ ಎಮ್ ಮೆಣಸಿನಕಾಯಿ ಭಾಗವಹಿಸಿ, ಯೋಗದ ಮಹತ್ವ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ದಿನಾಚರಣೆ ಆಚರಿಸುತ್ತಿರುವದರ ಕುರಿತು ವಿವರಿಸಿದರು. ನಂತರ ಮಕ್ಕಳಿಗೆ ಮೊಳಕೆಯೊಡೆದ ಕಾಳುಗಳನ್ನು ನೀಡಲಾಯಿತು.
Kshetra Samachara
15/06/2022 02:06 pm