ಹುಬ್ಬಳ್ಳಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ, 'ನಿಮ್ಮ ನಡಿಗೆ ಆರೋಗ್ಯದ ಕಡೆಗೆ' ಎಂಬ ಘೋಷಣೆ ಯೊಂದಿಗೆ ಎನ್ಐಎಂಎ ಧಾರವಾಡ ಜಿಲ್ಲಾ ಘಟಕ ಹಾಗೂ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಳೆ ಹುಬ್ಬಳ್ಳಿ ಸಂಯೋಗದೊಂದಿಗೆ, ಶ್ರೀ ಸಿದ್ಧಾರೂಢ ಮಠದಿಂದ ಹಳೆ ಹುಬ್ಬಳ್ಳಿ ಮಾರ್ಗವಾಗಿ ಅಹಿಂಸಾ ವೃತ್ತ ಹಾಗೂ ಇಂಡಿ ಪಂಪ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಚೇರ್ಮನ್ ಗೋವಿಂದ ಜೋಶಿ ಹಾಗೂ ಹುಬ್ಬಳ್ಳಿ ವಾಯುವ್ಯ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಕ ರಾಮನಗೌಡರು, ನಡಿಗೆ ಕಾರ್ಯಕ್ರಮಕ್ಕೆ ಹಸಿರು ಧ್ವಜದ ನಿಶಾನೆ ಮೂಲಕ ಚಾಲನೆ ನೀಡಿದರು.
ಈ ಜಾಗೃತಿಯಲ್ಲಿ ಧಾರವಾಡ ಜಿಲ್ಲಾ ಎನ್ಐಎಂಎ ಪ್ರಧಾನ ಕಾರ್ಯದರ್ಶಿ ಡಾ. ಸಿ. ತ್ಯಾಗರಾಜ್, ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ,ಎ,ಎಸ್ ಪ್ರಶಾಂತ್, ಆಜಾದಿಕ ಆಮೃತ ಮಹೋತ್ಸವ ಚೇರ್ಮೆನ ಡಾ.ಪ್ರದೀಪ್ ದೇಸಾಯಿ, ಡಾ. ಗುರುನಾಥ್ ಕಂಠಿ, ಸಂಘದ ಉಪಾಧ್ಯಕ್ಷರಾದ ಡಾ ನಾಗರಾಜ್ ಆಚಾರ್ ಬಡಿಗೇರ್. ಡಾ. ವಿ. ಆರ್.ಪಾಟೀಲ್ ಡಾ, ಮಹೇಂದ್ರ ರೋಣಿ ಮಠ ಡಾ. ಭಾರದ್ವಾಡ,ಡಾ. ತಡಸದ ಮಠ ಡಾ ಮೈಗೂರ್ ಡಾ. ಮಾರ್ಕಂಡೇಯ ಜೇಡರ, ಡಾ.ತ್ಯಾಗರಾಜ, ಡಾ.ನಿರ್ಮಲಾ, ಸಾಲಿಡಾ. ನಿರ್ಮಲಾ ಪಟ್ಟದ್ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Kshetra Samachara
14/04/2022 03:07 pm