ನವಲಗುಂದ : ನವಲಗುಂದ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಧಾರವಾಡದ ಹಿರಿಯ ಸಹಕಾರಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಪಿ ಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ದಿವಂಗತ ದೇಸಾಯಿಗೌಡರು ಪಾಟೀಲ ಅವರ ಪ್ರಥಮ ಪುಣ್ಯ ಸ್ಮರಣಾರ್ಥ ಅಂಗವಾಗಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮ, ಧಾರವಾಡದ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಹುಬ್ಬಳ್ಳಿಯ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಶ್ರೀಗುರು ಮಹಿಪತಿರಾಜ ನೇತ್ರ ಬ್ಯಾಂಕ್ ಹಾಗೂ ಸಂಶೋಧನಾ ಸಂಸ್ಥೆ ಮತ್ತು ನವಲಗುಂದ ಸರಕಾರಿ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಆಗಮಿಸಿದ್ದರು.
ಇನ್ನು ನೇತ್ರಾಧಿಕಾರಿಗಳಾದ ಇಂದುಮತಿ ವೈದ್ಯ, ಪದ್ಮಾವತಿ ರತನ್ ಅವರಿಂದ ಮೂವತ್ತಕ್ಕೂ ಹೆಚ್ಚು ಫಲಾನುಭವಿಗಳ ನೇತ್ರ ತಪಾಸಣೆ ಮಾಡಲಾಯಿತು. ನೇತ್ರ ತಪಾಸಣೆಗೊಳಗಾದ ಫಲಾನುಭವಿಗಳಿಗೆ ಶುಕ್ರವಾರದಂದು ಹುಬ್ಬಳ್ಳಿಯ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಮಾಡಲಾಗುವುದು.
ಈ ಸಂಧರ್ಭದಲ್ಲಿ ಬಾಪುಗೌಡ ಡಿ ಪಾಟೀಲ, ರಾಜುಗೌಡ ಪಾಟೀಲ, ಶಂಕರಮ್ಮ ಪಾಟೀಲ, ಪ್ರಭುಗೌಡ ಪಾಟೀಲ, ಗುರುಪ್ರಸಾದ ದೇಸಾಯಿಗೌಡರು ಪಾಟೀಲ, ಡಾ. ಸಿ ಬಿ ಕರಿಗೌಡ, ಡಾ. ಶಶಿ ಪಾಟೀಲ, ಡಾ. ರೂಪಾ ಕಿಣಗಿ, ಎಸ್ ಎಂ ಹೊನಕೇರಿ, ಡಾ. ಸಂಜೀವ ಕುಲಕರ್ಣಿ, ಇಂದುಮತಿ ವೈದ್ಯ, ಪದ್ಮಾವತಿ ರತನ್ ಸೇರಿದಂತೆ ಪಿ ಎಲ್ ಡಿ ಬ್ಯಾಂಕ್ ನ ಸಿಬ್ಬಂದಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
Kshetra Samachara
11/04/2022 09:56 pm