ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಮಾಜಿಕ ಸೇವೆಗೆ ಹೆಸರಾದ ದೇಶಪಾಂಡೆ ಫೌಂಡೇಶನ್: 38 ಲಕ್ಷ ಮೌಲ್ಯದ ಉಪಕರಣಗಳ ಕೊಡುಗೆ...!

ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ಒಂದಿಲ್ಲೊಂದು ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ಮಾಡುತ್ತಲೇ ಬಂದಿದೆ. ಅಲ್ಲದೆ ಕಿಲ್ಲರ್ ಕೊರೋನಾ ವೈರಸ್ ಭೀತಿಯ ಮೊದಲ ಹಾಗೂ ಎರಡನೇ ಅಲೆಯಲ್ಲಿ ಮಹತ್ವದ ಕಾರ್ಯವನ್ನು ಮಾಡಿರುವ ದೇಶಪಾಂಡೆ ಫೌಂಡೇಶನ್ ಈಗ ಸಾರ್ವಜನಿಕ ಆರೋಗ್ಯ ಸೇವೆಗೆ ಮತ್ತೊಂದು ನೆರವನ್ನು ನೀಡಿದೆ.

ಹೌದು.. ಜಿಲ್ಲೆಯ ತುರ್ತು ಆರೋಗ್ಯ ಸೇವೆಗಳ ಮೂಲಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದೇಶಪಾಂಡೆ ಫೌಂಡೇಶನ್ ಸಹಯೋಗದೊಂದಿಗೆ ಎಡಿಎಂ ಆಗ್ರೋ ವತಿಯಿಂದ 38 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ವಿಶ್ವ ದರ್ಜೆಯ ವೈದ್ಯಕೀಯ ಪರಿಕರಗಳನ್ನು ಒದಗಿಸಲಾಯಿತು. ಕೋವಿಡ್ ಮತ್ತು ಇತರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆ ನಿಟ್ಟಿನಲ್ಲಿ ಅತ್ಯಂತ ಅವಶ್ಯಕವಾಗಿರುವ 22 ಲಕ್ಷ ರೂ. ಮೌಲ್ಯದ ಒಂದು ಅನಸ್ತೇಷಿಯಾ ವರ್ಕ್‌ಸ್ಟೇಷನ್, ತಲಾ 1.8 ಲಕ್ಷ ರೂ. ಮೌಲ್ಯದ ಎಂಟು ನವಜಾತ ಶಿಶುಗಳ ಸುರಕ್ಷತೆಗಾಗಿನ ನಿಯೋನೇಟಲ್ ವಾರ್ಮರ್ ಗಳು ಹಾಗೂ ತಲಾ 6,000 ರೂ. ಮೌಲ್ಯದ 10 ವೈದ್ಯಕೀಯ ಉಪಕರಣಗಳ ಸೆಟ್ ಗಳನ್ನು ಕಿಮ್ಸ್ ಆಸ್ಪತ್ರೆಯ ಆಡಳಿತ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರ ಮಾಡಲಾಯಿತು. ಈ ಕಾರ್ಯದ ಕುರಿತು ಪಾಲಿಕೆ ಆಯುಕ್ತರು ಕೂಡ ಪ್ರಶಂಸೆ ವ್ಯಕ್ತಪಡಿಸಿದರು.

ಇನ್ನೂ ದೇಶಪಾಂಡೆ ಫೌಂಡೇಶನ್ ಸಹಯೋಗದೊಂದಿಗೆ ಎಡಿಎಂ ಆಗ್ರೋದಿಂದ ನೀಡಲಾಗಿರುವ ಈ ಅತ್ಯಾಧುನಿಕ ವೈದ್ಯಕೀಯ ಪರಿಕರಗಳು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೆ ಮತ್ತು ರೋಗಿಗಳು ಶೀಘ್ರ ಗುಣಮುಖರಾಗುವಂತೆ ನೋಡಿಕೊಳ್ಳುವಲ್ಲಿ ಕಿಮ್ಸ್‌ಗೆ ನೆರವಾಗಲಿದೆ.

ದೇಶಪಾಂಡೆ ಪ್ರತಿಷ್ಠಾನ ಕಿಮ್ಸ್‌ಗೆ ಬಹು ವಿಧದಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವು ನೀಡಿದೆ. ಅಲ್ಲದೇ ಸಂದಿಗ್ಧ ಸಮಯದಲ್ಲಿ ಸಾಕಷ್ಟು ಮುತುವರ್ಜಿಯಿಂದ ಸೇವೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಸೇವೆಯನ್ನು ಮಾಡಲಿ ಎಂಬುವುದು ನಮ್ಮ ಆಶಯವಾಗಿದೆ.

Edited By : Shivu K
Kshetra Samachara

Kshetra Samachara

21/01/2022 09:56 pm

Cinque Terre

50.5 K

Cinque Terre

3

ಸಂಬಂಧಿತ ಸುದ್ದಿ