ಅಳ್ನಾವರ: ಮಾಜಿ ಶಾಸಕ ಸಂತೋಷ ಲಾಡ್ ಅವರ ಉಚಿತ ಸಂಚಾರಿ ಚಿಕಿತ್ಸಾ ವಾಹನ ಇಂದು ಅಳ್ನಾವರ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಉಚಿತ ಚಿಕಿತ್ಸೆ ನೀಡಲಾಯಿತು.
ಕೋವಿಡ್ ಪರೀಕ್ಷೆ,ರಕ್ತ ತಪಾಸಣೆ ,ಕೆಮ್ಮು,ನೆಗಡಿ,ಜ್ವರ ಸೇರಿದಂತೆ ಹಲವಾರು ಕಾಯಿಲೆಗೆ ಉಚಿತ ಚಿಕಿತ್ಸೆ ನೀಡಲಾಯಿತು.
ಅಲ್ಲಮಪ್ರಭು ದೇವಸ್ಥಾನದ ಆವರದಲ್ಲಿ ಚಿಕಿತ್ಸೆ ಗೆ ವ್ಯವಸ್ಥೆ ಮಾಡಲಾಗಿತ್ತು, ಸಾರ್ವಜನಿಕರೆಲ್ಲರು ಸರದಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡರು.
ಡಾಕ್ಟರ್,ನರ್ಸ್ ಸೇರಿದಂತೆ ಒಂದು ಆಂಬ್ಯುಲೆನ್ಸ್ ಅಳ್ನಾವರ ಭಾಗದ ಜನತೆಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸುವುದಲ್ಲದೆ ಕೆಮ್ಮು ನೆಗಡಿ ಎಂತಹ ಸಣ್ಣ ಕಾಯಿಲೆಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರಾದ ಸಂತೋಷ ಲಾಡ್ ರವರು ಅಧಿಕಾರ ವಿದ್ದಾಗ ಈ ಭಾಗಕ್ಕೆ ಬರುವುದು ಅಪರೂಪ ವಾಗಿತ್ತು.ತಮ್ಮ ಆಪ್ತ ಕಾರ್ಯದರ್ಶಿ ಗಳ ಮೂಲಕವೇ ಕಾರ್ಯ ನಿರ್ವಹಿಸುತ್ತಿದ್ದ ಅವರು ಅಧಿಕಾರ ಕಳೆದುಕೊಂಡ ನಂತರ ಪಾಠ ಕಲಿತಂತಾಗಿದೆ.ಇವೆಲ್ಲ ರಾಜಕೀಯ ನಾಟಕಗಳು ಎಂದು ಹಲವರು ದೂರಿದರೆ ಇನ್ನು ಕೆಲವರು ಉಚಿತ ಆರೋಗ್ಯ ಚಿಕಿತ್ಸೆ ಸಿಗುತ್ತಿದೆ ಎಂದು ಸಂತಸ ಪಟ್ಟರು.
Kshetra Samachara
29/10/2021 03:12 pm