ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತಮಿಳುನಾಡಿನ 41 ಪೊಲೀಸರು ಬುಲೆಟ್‌ನಲ್ಲಿ ಹುಬ್ಬಳ್ಳಿಗೆ ಬಂದಿದ್ಯಾಕೆ?

ಹುಬ್ಬಳ್ಳಿ: ಭಾರತದ ಮಾಜಿ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಈ ಬಾರಿ ತಮಿಳುನಾಡಿನ ಪೊಲೀಸರು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ.

ಇದೆ ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತಾ ದಿನದ ನಿಮಿತ್ತವಾಗಿ ತಮಿಳುನಾಡು ಸರ್ಕಾರದ ಆದೇಶದಂತೆ ಅಕ್ಟೋಬರ್ 15ರಿಂದ ತಮಿಳುನಾಡಿನ ಪೊಲೀಸರು ಕನ್ಯಾಕುಮಾರಿಯಿಂದ ಗುಜರಾತಿನ ಕೆವಾಡಿಯಾವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ‍್ಯಾಲಿ ಇಂದು ಹುಬ್ಬಳ್ಳಿಗೆ ತಲುಪಿದ್ದು. ನಗರದ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ತಮಿಳುನಾಡಿನ ಪೊಲೀಸರಿಗೆ, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ರಾಮರಾಜನ್ ಸ್ವಾಗತಿಸಿದರು. ನಂತರ ಕುಸಗಲ್ ರಸ್ತೆಯಲ್ಲಿರುವ ರಾಯಲ್ ಎನ್ ಫೀಲ್ಡ್ ಶೋ ರೂಮ್‌ಗೆ ಭೇಟಿ ನೀಡಿದ ಪೊಲೀಸರು, ಅಲ್ಲಿಂದ ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ನ್ಯಾಷನಲ್ ಹೈವೇ ಮೂಲಕ ಗುಜರಾತ್‌ಗೆ ಪ್ರಯಾಣ ಬೆಳೆಸಿದರು.

Edited By : Manjunath H D
Kshetra Samachara

Kshetra Samachara

19/10/2021 03:09 pm

Cinque Terre

58.9 K

Cinque Terre

2

ಸಂಬಂಧಿತ ಸುದ್ದಿ