ಹುಬ್ಬಳ್ಳಿ- ರೋಗಿ ವೃದ್ಧೆಯೋರ್ವಳು ಮೊದಲ ಟ್ರಾನ್ಸ್ ಕಥೀಟರ್ ಮಹಾಪಧಮನಿಯ ಕವಾಟ ಬದಲಿಸುವ ಮೂಲಕ ಹೊಸ ಜೀವನ ಪಡೆದಿದ್ದಾರೆಂದು ಹುಬ್ಬಳ್ಳಿಯ ಕೆ.ಎಲ್.ಇ. ಸುಚಿರಾಯು ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಮೀತ್ ಸತ್ತೂರ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ವಾಸಕೋಶ ತೊಂದರೆಯಿಂದ ಬಳಳುತ್ತಿದ್ದ 75 ವರ್ಷದ ವೃದ್ದೆಯೋರ್ವರಿಗೆ ಆಸ್ಪತ್ರೆಯ ಕಾರ್ಡಿಯಾಲಜಿ ತಂಡದ ಮೌಲ್ಯ ಮಾಪನದ ನಂತರ, ಮಹಾಪಧಮನಿಯ ಕವಾಟದ ಸ್ಪೇನೋಸಿಸ್ ಕವಾಟದ ಬದಲಿ ಅಗತ್ಯವಿತ್ತು ಎಂದ ಅವರು, ವೃದ್ಧೆಯ ಶುದ್ಧತ್ವವು ಕಡಿಮೆಯಾಗಿತ್ತು ಮತ್ತು ಹಲವು ಕೋಮೋ ಬ್ರೀಡ್ ಸಮಸ್ಯೆಯಿಂದ ಕೂಡಿದ್ದು ತೆರೆದ ಹೃದಯ ಕವಾಟದ ಬದಲಿ ಶಸ್ತ್ರ ಚಿಕಿತ್ರೆಗೆ ವೃದ್ದೆ ಅನರ್ಹಳಾಗಿದ್ದಳು.
ಕೆ.ಎಲ್.ಇ ಶುಚಿರಾಯು ಹೃದಯ ರೋಗ ತಜ್ಞ ತಂಡದಿಂದ ವಿವರವಾದ ಚರ್ಚೆಯ ನಂತರ ಟ್ರಾನ್ಸ್ ಕಟೀಟರ ಮಹಾಪಧಮನಿಯ ಕವಾಟ ಬದಲಿ ಎಂಬ ಇತ್ತೀಚಿನ ವಿಧಾನದೊಂದಿಗೆ, ಮುಂದುವರೆಯಲು ನಿರ್ಧರಿಸಲಾಯಿತು ಎಂದು, ಈ ಸರಿಯಾದ ಯೋಜನೆಯ ನಂತರ ರೋಗಿ ವೃದ್ಧೆಯು 90 ನಿಮಿಷಗಳಲ್ಲಿ ಸ್ಥಳೀಯ ಅರಿವಳಿಕೆಯೊಂದಿಗೆ ಯಶಸ್ವಿ ಟಿ.ಎ.ವಿ.ಆರ್. ಪ್ರಕ್ರಿಯೆಗೆ ಒಳಗಾದರು ವೃದ್ದೆಯು ಗುಣಮುಖರಾದರು.
ಶೀಘ್ರದಲ್ಲಿಯೆ ಹೃದಯ ವರ್ಗಾವಣೆ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದಾರೆಂದು ಡಾ. ಸತ್ತೂರ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಎನ್.ಎಸ್. ಹಿರೇಗೌಡರ, ಡಾ. ಶರಣ ಹಳ್ಳದ, ಡಾ. ಷಣ್ಮುಕ ಹಿರೇಮಠ, ಡಾ. ರಾಜಕುಮಾರ ಹಿರೇಮಠ ಉಪಸ್ಥಿತರಿದ್ದರು.
Kshetra Samachara
24/09/2021 02:56 pm