ಹುಬ್ಬಳ್ಳಿ: ಕೋವಿಡ್ ಮೂರನೇ ಅಲೆಯ ಭೀತಿಯ ನಡುವೆ ಸದ್ದಿಲ್ಲದೆ, ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಆ ಕಾಯಿಲೆ, ಪಾಲಕರ ಆತಂಕ ಹೆಚ್ಚು ಮಾಡಿದೆ. ಹುಬ್ಬಳ್ಳಿಯ ಆಸ್ಪತ್ರೆಗಳಲ್ಲಿ ಈಗ ಮಕ್ಕಳಿಗೆ ಬೆಡ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾಕೆ ಅಂತಿರಾ ಈ ಸ್ಟೋರಿ ನೋಡಿ
ಕೋವಿಡ್ ಎರಡನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಆದರೆ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಕೋವಿಡ್ ಸೊಂಕು ತಗಲುತ್ತದೆ ಅಂತಾ ತಜ್ಞರ ತಂಡ ಹೇಳುತ್ತಿದೆ. ಈ ಆತಂಕದ ನಡುವೆಯೆ ಈಗ ಚಿಕ್ಕ ಮಕ್ಕಳಿಗೆ ಹೊಸದೊಂದು ಕಾಯಿಲೆ ಕಾಣಿಸಿಕೊಂಡಿದ್ದು ಮಕ್ಕಳ ಜೀವ ಹಿಂಡುತ್ತಿದೆ. ಉಸಿರಾಟದ ತೊಂದರೆಯಿಂದ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಬಹುತೇಕ ಮಕ್ಕಳಿಗೆ ನ್ಯುಮೋನಿಯಾ ಕಾಣಿಸಿಕೊಂಡಿದೆ. ನೆಗಡಿ, ಜ್ವರ, ಕಫದಿಂದ ಮಕ್ಕಳು ಬಳಲುತ್ತಿದ್ದು, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಲ್ಲಿ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಕಿಮ್ಸ್ ವೈದ್ಯರು ಹೇಳುತ್ತಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ನಲ್ಲಿ 163 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಒಂದು ವರ್ಷದ 95 ಮಕ್ಕಳಿಗೆ ಕಾಯಿಲೆ ಕಾಣಿಸಿಕೊಂಡಿದ್ದು, 23 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಬೆಡ್ ಗಳು ಬಹುತೇಕ ಭರ್ತಿಯಾಗಿದ್ದು, ಇದೆ ತಿಂಗಳಲ್ಲಿ 7 ಮಕ್ಕಳನ್ನು ಈ ಮಹಾಮಾರಿ ಬಲಿ ತೆಗೆದುಕೊಂಡಿದೆ. ಕೋವಿಡ್ ಮೂರನೇ ಅಲೆಗೂ ಮೊದಲೆ ಮಕ್ಕಳ ಜೀವ ಹಿಂಡುತ್ತಿರುವ ಈ ಕಾಯಿಲೆ ಬಗ್ಗೆ ಕಿಮ್ಸ್ ವೈದ್ಯರು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ.
ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿರುವ ಜನರು, ಭಯದ ನಡುವೆ ಬದುಕುತ್ತಿರುವಾಗಲೆ ಈಗ ಮಕ್ಕಳ ಜೀವ ಹಿಂಡುತ್ತಿರುವ ನ್ಯುಮೋನಿಯಾ ಬಗ್ಗೆ ಪಾಲಕರು ನಿರ್ಲಕ್ಷ್ಯ ಮಾಡದೆ ಎಚ್ವರ ವಹಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!
Kshetra Samachara
16/09/2021 02:44 pm