ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಟೇಸ್ಟಿಂಗ್ ಪೌಡರ್ ನಿಷೇಧಿಸುವಂತೆ ಸಂಸ್ಕಾರ ಫೌಂಡೇಶನ್ ವತಿಯಿಂದ ಉಪವಾಸ ಸತ್ಯಾಗ್ರಹ

ಹುಬ್ಬಳ್ಳಿ: ಫಾಸ್ಟ್ ಫುಡ್ ನಲ್ಲಿ ಬಳಸುವ ಟೇಸ್ಟಿಂಗ್ ಪೌಡರ್ ವಿಷಕಾರಿ ಪದಾರ್ಥವಾಗಿದ್ದು, ಈ ಪದಾರ್ಥಗಳನ್ನು ನಿಷೇಧ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಇದೇ ತಿಂಗಳು 25 ಕ್ಕೆ ಒಂದು ದಿನ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕಾರ ಫೌಂಡೇಶನ್ ಅಧ್ಯಕ್ಷ ಆರ್ ಲಕ್ಷ್ಮಣ ಹೇಳಿದರು. ‌

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ತಿಂಗಳಿನಿಂದ ರಾಜ್ಯ ಹಾಗೂ ಜಿಲ್ಲೆಯಲ್ಲಿ ಆಹಾರದಲ್ಲಿ ಬಳಸಲಾಗುತ್ತಿರುವ ಟೆಸ್ಟಿಂಗ್ ಪೌಡರ್( ಅಜಿನೋ ಮೋಟೊ) ವಿಷಕಾರಿ ಪದಾರ್ಥ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದು, ಅದರಂತೆ ಹಲವಾರು ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 50 ಕ್ಕೂ ಹೆಚ್ಚು ಟೇಸ್ಟಿಂಗ್ ಪೌಡರ್ ವಶಕ್ಕೆ ತೆಗೆದುಕೊಂಡು ನಾಶ ಮಾಡಿದ್ದೇವೆ ಎಂದರು.

ಆದ್ದರಿಂದ ರಾಜ್ಯ ಸರಕಾರ ಟೇಸ್ಟಿಂಗ್ ಪೌಡರ್ ಸಂಪೂರ್ಣವಾಗಿ ರಾಜ್ಯದಲ್ಲಿ ನಿಷೇಧ ಮಾಡಿ ಮುಂದೆ ಆಗಬೇಕಾದ ಭಾರಿ ಅನಾಹುತ ತಪ್ಪಿಸಬೇಕು, ಟೇಸ್ಟಿಂಗ್ ಪೌಡರ್ ನಿಂದ ಕ್ಯಾನ್ಸರ್, ಆ್ಯಸಿಡಿಟಿ, ಹಲವಾರು ರೋಗಗಳು ಬರುತ್ತವೆ,ಇದಕ್ಕಾಗಿ ನಮ್ಮ ಸಂಸ್ಥೆಯಿಂದ 31 ಜಿಲ್ಲೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತೆ ಎಂದರು..

Edited By : Manjunath H D
Kshetra Samachara

Kshetra Samachara

18/01/2021 12:45 pm

Cinque Terre

15.88 K

Cinque Terre

1

ಸಂಬಂಧಿತ ಸುದ್ದಿ