ಧಾರವಾಡ: ಕೊರೊನಾ ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಸರ್ಕಾರ ಬಾಯಿ ಬಡಿದುಕೊಳ್ಳುತ್ತಲೇ ಇದೆ. ಆದ್ರೆ, ನಮ್ಮ ಜನ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಸಾಮಾಜಿಕ ಅಂತರ ಒಂದೆಡೆ ಇರಲಿ, ಇದೀಗ ಮಾಸ್ಕ್ ಕೂಡ ಬಿಟ್ಟು ಸುತ್ತಾಡುತ್ತಿದ್ದಾರೆ. ಮಾರುಕಟ್ಟೆ ಪ್ರದೇಶ, ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿದೆ. ಕೊರೊನಾದ ಮಧ್ಯೆಯೂ ಸರ್ಕಾರ ಶಾಲಾ, ಕಾಲೇಜುಗಳನ್ನು ಪುನರಾರಂಭಿಸಿದೆ.
ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಹೇಳಿದರೂ ಅದಕ್ಕೆ ಯಾರೂ ಕ್ಯಾರೆ ಎನ್ನುತ್ತಿಲ್ಲ.
ಧಾರವಾಡದ ಕರ್ನಾಟಕ ಕಾಲೇಜಿನ ಶುಲ್ಕ ಪಾವತಿಲು ಜ.11 ಕೊನೆಯ ದಿನವಾಗಿದೆ. ನಾಳೆ, ನಾಡಿದ್ದು ರಜೆ ಇರುವುದರಿಂದ ಕಾಲೇಜು ಶುಲ್ಕ ಪಾವತಿಸಲು ವಿದ್ಯಾರ್ಥಿಗಳು ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೇ ಕ್ಯೂ ನಿಂತಿದ್ದರು.
ಕೆಸಿಡಿ ಕಾಲೇಜು ಆವರಣದಲ್ಲೇ ಇರುವ ಕೆನರಾ ಬ್ಯಾಂಕ್ ನಲ್ಲಿ ಚಲನ್ ಕಟ್ಟುವುದಕ್ಕೋಸ್ಕರ ವಿದ್ಯಾರ್ಥಿಗಳು ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೇ ಗುಂಪು ಗುಂಪಾಗಿ ನಿಂತಿದ್ದು ಕಂಡು ಬಂತು. ಕೊರೊನಾ ಇನ್ನೂ ದೂರ ಹೋಗಿಲ್ಲ.
ವಿದ್ಯಾರ್ಥಿಗಳು ರಿಸ್ಕ್ ತೆಗೆದುಕೊಳ್ಳದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ಉಜ್ವಲ ಭವಿಷ್ಯವನ್ನೂ ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಕಳಕಳಿ.
Kshetra Samachara
08/01/2021 07:06 pm