ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವಳಿ ನಗರದಲ್ಲೂ ಕೊರೊನಾ ವ್ಯಾಕ್ಸಿನ್ ಹಂಚಿಕೆಗೆ ಆರೋಗ್ಯ ಕೇಂದ್ರ ಸಜ್ಜು

ಹುಬ್ಬಳ್ಳಿ : ಡೆಡ್ಲಿ ಸೋಂಕು ಕೊರೊನಾ ಮಟ್ಟಹಾಕಲು ಮದ್ದೊಂದು ಸಿದ್ದವಾಗಿದೆ. ಹಂತ ಹಂತವಾಗಿ ವಾಕ್ಸಿನ್ ಹಂಚಲು ಸರ್ಕಾರ ಚಿಂತನೆ ನಡೆಸಿದೆ.

ಇತ್ತ ಹುಬ್ಬಳ್ಳಿ- ಧಾರವಾಡದಲ್ಲಿ ಕೊರೊನಾ ವ್ಯಾಕ್ಸಿನ್ ಹಂಚಿಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಲಸಿಕೆ ಸಂಗ್ರಹಕ್ಕೆ ಐಎಲ್ ಆರ್ ಡೀಪ್ ಫ್ರೀಜರ್ ಗಳು ಸಜ್ಜಾಗಿವೆ.

ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಪೋಲಿಯೋ, ಬಿಸಿಜಿ, ಎಪಿಟೈಟಿಸ್ ಬಿ, ಬರ್ತ್ ಡೋಸ್, ಪ್ಯಾಂಟಾ, ರೋಟಾ ವೈರಸ್, ಡಿಪಿಟಿ, ಮತ್ತು ಟಿಡಿ ಲಿಸಿಕೆಗಳನ್ನು ಫ್ರೀಜರ್ಗಳಲ್ಲಿ ಸಂಗ್ರಹಿಸಿ ಇಡಲಾಗಿದೆ.

ಅದೇ ವ್ಯವಸ್ಥೆಯನ್ನು ಕೊರೊನಾ ವ್ಯಾಕ್ಸಿನ್ ಸಂಗ್ರಹಕ್ಕೆ ಬಳಕೆ ಮಾಡಲು ತಯಾರಿ ನಡೆದಿದೆ.

ಧಾರವಾಡ ಜಿಲ್ಲೆಯಲ್ಲಿ 40 ಲಕ್ಷ ಡೋಜ್ ಸಂಗ್ರಹ ಸಾಮರ್ಥ್ಯವಿದೆ.

ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಈಗಾಗಲೇ 20 ಸಾವಿರ ಡೋಜ್ ಸಂಗ್ರಹಕ್ಕೆ ಐಎಲ್ ಆರ್ ವ್ಯವಸ್ಥೆಯಿದೆ.

ಎಸ್.ಡಿಎಂ ಆಸ್ಪತ್ರೆ ಮತ್ತು ರೈಲ್ವೆ ಆಸ್ಪತ್ರೆಯಲ್ಲೂ ವ್ಯಾಕ್ಸಿನ್ ಸಂಗ್ರಹಕ್ಕೆ ಅವಕಾಶವಿದೆ.

Edited By : Nirmala Aralikatti
Kshetra Samachara

Kshetra Samachara

05/01/2021 11:44 am

Cinque Terre

22.36 K

Cinque Terre

4

ಸಂಬಂಧಿತ ಸುದ್ದಿ