ಕುಂದಗೋಳ : ಸ್ವಾಮಿ ಮನುಷ್ಯ ಈ ಕೊರೊನಾ ರೋಗದ ಸುಳಿಯಿಂದ ಪಾರಾಗಿ ಜಗತ್ತನ್ನ ಮೊದಲಿನಂತೆ ನೋಡುವ ಮೊದಲೇ ಇಲ್ಲಿ ಜಾನುವಾರುಗಳಿಗೆ ಮತ್ತೊಂದು ರೋಗ ಅಪ್ಪಳಿಸಿ ರೈತಾಪಿ ಕುಲವನ್ನು ಸಂಕಷ್ಟಕ್ಕೆ ತಳ್ಳಿದೆ.
ವೈದ್ಯರೇ ಹೇಳುವ ಪ್ರಕಾರ ಮೊದಲು ದಕ್ಷಿಣ ಆಪ್ರೀಕಾ, ನೈಜರೀಯಾದಲ್ಲಿ ಕಾಣಿಸಿದ ಲಿಂಪಿಸ್ಕೀನ್ ರೋಗ ಭಾರತಕ್ಕೂ ಕಾಲಿಟ್ಟಿದೆ ಈಗಾಗಲೇ ದೇಶಾದ್ಯಂತ ವ್ಯಾಪಿಸಿ ಕುಂದಗೋಳ ತಾಲೂಕಿನ ವಿಠಲಾಪುರ, ಗುರುವಿನಹಳ್ಳಿ, ಮಳಲಿಯಲ್ಲಿ ಮೊದಲು ಕಾಣಿಸಿಕೊಂಡ ಪ್ರಕರಣಗಳು ಇಡೀ ತಾಲೂಕಿಗೆ ವ್ಯಾಪಿಸಿದ್ದು ಇಂದಿಗೆ ಬರೋಬ್ಬರಿ 432 ಜಾನುವಾರುಗಳಲ್ಲಿ ಲಿಂಪಿಸ್ಕೀನ್ ವೈರಸ್ ಪತ್ತೆಯಾಗಿದ್ದು ಹೊಸ ಪ್ರಕರಣಗಳು ಹೆಚ್ಚತ್ತಲೆ ಇವೆ.
ಈ ರೋಗದ ಪರಿಣಾಮ ಜಾನುವಾರುಗಳು ಕೂಳು, ನೀರು ಬಿಟ್ಟಿದ್ದು ಮೈಮೆಲಾದ ಚರ್ಮದ ಗುಳ್ಳೆಗಳು ತುರಿಕೆ ಎದ್ದಿವೆ, ಕಾಲುಗಳಲ್ಲಿ ಗಾಯ ಕಾಣಿಸಿಕೊಂಡಿದ್ದು ದನಗಳು ಕುಂಟುತ್ತಿವೆ. ಈ ರೋಗ ಎತ್ತು, ಎಮ್ಮೆ, ಕೋಣ, ಹಸು, ಹೋರಿಗಳಿಗಷ್ಟೇ ಆವರಿಸಿದ್ದು ಆಡು, ಕುರಿ,ಕೋಳಿ ಇದರಿಂದ ಹೊರತಾಗಿದ್ದರು ಜನರ ಭಯ ದೂರವಾಗಿಲ್ಲ.
ಈ ರೋಗದ ಕುರಿತು ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳುತ್ತಿದ್ದರಾದರೂ ಜಾನುವಾರುಗಳನ್ನೇ ನಂಬಿದ ರೈತನಿಗೆ ಎಲ್ಲಿಲ್ಲದ ಮರುಕ ಕಾಡುತ್ತಿದೆ.
Kshetra Samachara
23/09/2020 06:19 pm