ಹುಬ್ಬಳ್ಳಿ: ಬೇಕಾಬಿಟ್ಟಿ ಪರೋಟ ತಯಾರು ಮಾಡುತ್ತಿದ್ದ ಘಟಕದ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿದ್ದು, ಒಂದು ವಾರದಲ್ಲಿ ಘಟಕ ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಶ್ರೀಧರ್ ದಂಡೆಪ್ಪನವರ ದಾಳಿ ನಡೆಸಿದ್ದಾರೆ. ವಾರ್ಡ್ ಸಂಖ್ಯೆ 76ರಲ್ಲಿ ಬರುವ ಇಸ್ಲಾಂಪುರ ಪರೋಟ ತಯಾರಿಕಾ ಘಟಕದ ಮೇಲೆ ದಾಳಿ ಮಾಡಲಾಗಿದೆ. ಪಾಲಿಕೆ ಸದಸ್ಯರ ದೂರಿನ ಮೇರೆಗೆ ಪರೋಟ ತಯಾರಿಕೆ ಫ್ಯಾಕ್ಟರಿಗೆ ಭೇಟಿ ನೀಡಿದ ಅಧಿಕಾರಿಗಳು, ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿಯಾಗಿ, ಸ್ವಚ್ಛತೆ ಕಾಪಾಡಿಕೊಳ್ಳದೆ ಗ್ಲೌಸ್ ಹಾಕಿಕೊಳ್ಳದೆ ಪರೋಟ ತಯಾರಿಸುತ್ತಿರುವುದನ್ನು ಪರಿಶೀಲಿಸಿ ಒಂದು ವಾರದಲ್ಲಿ ಫ್ಯಾಕ್ಟರಿ ಬಂದ್ ಮಾಡುವಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
Kshetra Samachara
08/09/2022 11:17 am