ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನ್ ಲಾಕ್ ಬಳಿಕ‌ ವಿಮಾನ‌ ಹಾರಾಟ : ಹೊಸ ಯೋಜನೆ ಕುರಿತು ಸಭೆ

ಹುಬ್ಬಳ್ಳಿ: ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಆರೋಗ್ಯ ಹಿತರಕ್ಷಣಾ ಹಾಗೂ ವಿಮಾನ ನಿಲ್ದಾಣಗಳು ವಹಿಸಿಕೊಳ್ಳಬೇಕಾದ ಜಾಗೃತಿ ಕುರಿತು ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಸಭೆ ನಡೆಸಲಾಯಿತು.

ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಎಸ್‌ಒಪಿ ಗಳು ಮತ್ತು ಆಕಸ್ಮಿಕ ಯೋಜನೆಗಳು,ನಾಗರಿಕ ವಿಮಾನಯಾನ, ಏರೋಡ್ರೋಮ್ ಸಮಿತಿ ಸಭೆಯಲ್ಲಿ ಕಾನೂನುಬಾಹಿರ ಹಸ್ತಕ್ಷೇಪವನ್ನು ತಡೆಗಟ್ಟುವ ಆಕಸ್ಮಿಕ ಯೋಜನೆಯನ್ನು ನವೀಕರಿಸಲು ಚರ್ಚಿಸಲಾಯಿತು.

ಇನ್ನೂ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ,ವಿಮಾನ ನಿಲ್ದಾಣದ ವ್ಯವಸ್ಥಾಪಕ ಪ್ರಮೋದ ಠಾಕ್ರೆ,ಹು-ಧಾ ಮಹಾನಗರ ಪಾಲಿಕೆ‌ ಆಯುಕ್ತ ಸುರೇಶ‌ ಇಟ್ನಾಳ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

22/09/2020 06:53 pm

Cinque Terre

25.31 K

Cinque Terre

1

ಸಂಬಂಧಿತ ಸುದ್ದಿ