ಧಾರವಾಡ: ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ ಆ್ಯಂಟಿಜನ್ ಮೂಲಕ ಕೊರೊನಾ ತಪಾಸಣೆ ಮಾಡುವ ಕಾರ್ಯ ಚುರುಕು ಪಡೆದುಕೊಂಡಿದೆ. ಸಾರ್ವಜನಿಕರು ಮಾಸ್ಕ್ ಹಾಕದೇ ರಸ್ತೆಗಿಳಿದರೆ ಅವರನ್ನು ಕೊರೊನಾ ತಪಾಸಣೆಗೊಳಪಡಿಸುವುದು ಕಟ್ಟಿಟ್ಟ ಬುತ್ತಿ. ಟೆಸ್ಟ್ ಮಾಡಿಸಿ ಕೈಬಿಟ್ಟರೆ ಒಳ್ಳೆಯದು ಆದರೆ, ಅದರ ಜೊತೆಗೆ ಮಾಸ್ಕ್ ಹಾಕದೇ ಇರೋದಕ್ಕೆ ದಂಡವನ್ನೂ ತೆರಬೇಕಾಗಿದೆ.
ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಧಾರವಾಡ ಜಿಲ್ಲಾಡಳಿತ ಮತ್ತೆ ಜನಸಂದಣಿ ಇರುವ ಪ್ರದೇಶಗಳಲ್ಲಿ ಕೊರೊನಾ ಟೆಸ್ಟಿಂಗ್ ಮಾಡುವ ಬಸ್ ತರಿಸಿ ಮಾಸ್ಕ್ ಹಾಕದೇ ಬರುವ ಸಾರ್ವಜನಿಕರನ್ನು ತಪಾಸಣೆಗೊಳಪಡಿಸುತ್ತಿದೆ. ಗುರುವಾರವೂ ಧಾರವಾಡದ ಸುಭಾಷ ರಸ್ತೆಯಲ್ಲಿ ತಹಶೀಲ್ದಾರ ಡಾ.ಸಂತೋಷ ಬಿರಾದಾರ ನೇತೃತ್ವದಲ್ಲಿ ಅನೇಕ ಸಾರ್ವಜನಿಕರನ್ನು ಕೊರೊನಾ ತಪಾಸಣೆಗೊಳಪಡಿಸಲಾಯಿತು.
Kshetra Samachara
01/10/2020 05:58 pm