ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸೋಂಕಿತರ ಮನೆಗೆ ಪೋಸ್ಟರ್ ಅಭಿಯಾನ: ಪಾಲಿಕೆ ವಿನೂತನ ನಿರ್ಧಾರ...!

ಹುಬ್ಬಳ್ಳಿ: ಕೊರೋನಾ‌ ಸೋಂಕಿತರ ಮನೆಯನ್ನು ಹಾಗೂ ಓಣಿಯನ್ನು ಸೀಲ್ ಡೌನ್ ಮಾಡುತ್ತಿದ್ದ ಹು-ಧಾ ಮಹಾನಗರ ಪಾಲಿಕೆ ಕಳೆದ ಅಲೆಯಲ್ಲಿ ರೆಡ್ ಟೇಪ್ ಹಚ್ಚುವ ಕಾರ್ಯವನ್ನು ಕೈಗೊಂಡಿತ್ತು. ಈಗ ಮತ್ತೊಂದು ವಿನೂತನ ನಿರ್ಧಾರವನ್ನು ಕೈಗೊಂಡಿದೆ. ಕೋರೊನಾ ಸೋಂಕು ದೃಢಪಟ್ಟು ಮನೆಯಲ್ಲಿ ಆರೈಕೆಯಲ್ಲಿರುವವರ (ಹೋಮ್ ಐಸೊಲೇಶನ್) ಮನೆಗೆ ಪೋಸ್ಟರ್ ಹಚ್ಚಲು ಮುಂದಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾದರಿಯಂತೆ ಹು-ಧಾ ಮಹಾನಗರ ಪಾಲಿಕೆ ಕೂಡ ಸೋಂಕಿತರ ಮನೆ ಬಾಗಿಲಿಗೆ ಪೋಸ್ಟರ್ ಹಚ್ಚಲು ಮುಂದಾಗಿದೆ. ಇದರಿಂದ ಸೋಂಕಿತರ ಇರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಸೋಂಕಿತರು ಮನೆಯಿಂದ ಹೊರ ಬರದಂತೆ ತಡೆಯಲು ಈ ಒಂದು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಲ್ಲದೇ ಪ್ರತ್ಯೇಕ ತ್ಯಾಜ್ಯ ಸಂಗ್ರಹಣೆಗೆ ಇದು ಪೂರಕವಾಗಲಿದೆ. ಎ4 ಸೈಜಿನ ಪೋಸ್ಟರ್ ಹಚ್ಚಲು ಪಾಲಿಕೆ ನಿರ್ಧರಿಸಿದ್ದು, ಈಗಾಗಲೇ ಹು-ಧಾ ಮಹಾನಗರದಲ್ಲಿ ಸುಮಾರು ಮನೆಗಳನ್ನು ಗುರುತಿಸಿದೆ.

ಇನ್ನೂ ಕೋರೊನಾ ಸೋಂಕಿತರು ಮನೆಯಲ್ಲಿ ಆರೈಕೆಗೆ ಇರಬೇಕಾಗುತ್ತದೆ. ಬಳಿಕ ಗುಣಮುಖರಾಗಿರುವವರ ಮನೆಯಿಂದ ಈ ಪೋಸ್ಟರ್ ತೆಗೆದುಹಾಕಲಾಗುತ್ತದೆ. ಒಟ್ಟಿನಲ್ಲಿ ಸೋಂಕಿತರ ಮನೆ ಹಾಗೂ ಏರಿಯಾವನ್ನು ಸೀಲ್ ಡೌನ್ ಮಾಡುವ ಬದಲು ಈ ಒಂದು ನಿರ್ಧಾರವನ್ನು ಹು-ಧಾ ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.

ಒಟ್ಟಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿನೂತನ ನಿರ್ಧಾರವನ್ನು ಕೈಗೆತ್ತಿಕೊಂಡಿದೆ. ಎಷ್ಟರಮಟ್ಟಿಗೆ ಈ ನಿರ್ಧಾರ ಫಲ ನೀಡುತ್ತದೆಯೋ ಅಥವಾ ಹೆಸರಿಗೆ ಮಾತ್ರ ನಿರ್ಧಾರವಾಗುತ್ತದೆಯೋ ಕಾದು ನೋಡಬೇಕಿದೆ.

Edited By : Shivu K
Kshetra Samachara

Kshetra Samachara

20/01/2022 03:05 pm

Cinque Terre

60.78 K

Cinque Terre

10

ಸಂಬಂಧಿತ ಸುದ್ದಿ