ಕುಂದಗೋಳ : ಕೊರೊನಾ ವೈರಸ್ ಮೂರನೇ ಅಲೆ ಮುಂಜಾಗ್ರತೆಗೆ ಸರ್ಕಾರ ಕೈಗೊಂಡಿರುವ ವಿಕೇಂಡ್ ಕರ್ಫ್ಯೂ ವಾರ ಕಳೆದಂತೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಕಳೆದ ವಾರವಿದ್ದ ವಿಕೇಂಡ್ ಕರ್ಫ್ಯೂ ಗತ್ತು ಈ ವಾರದಲ್ಲಿ ತಗ್ಗಿದಂತ್ತಿದೆ. ಕುಂದಗೋಳ ಪಟ್ಟಣದಲ್ಲಿ ಈ ವಾರ ಸಂಕ್ರಮಣದ ಹಬ್ಬದ ಅಂಗವಾಗಿ ಗ್ರಾಹಕರ ಆಗಮನ ಮಾರುಕಟ್ಟೆ ಕಡೆ ವಾಲಿದ್ದು ವ್ಯಾಪಾರ ಚಟುವಟಿಕೆ ನಡೆದಿದೆ ಹೊರತು ಲಾಭ ಕಂಡಿಲ್ಲಾ.
ಮಾರ್ಕೆಟ್ ರಸ್ತೆ, ಮೂರಂಗಡಿ ಕ್ರಾಸ್'ನಲ್ಲಿ ವ್ಯಾಪಾರ ಚಟುವಟಿಕೆ ಆರಂಭವಾಗಿದ್ದರೆ , ತಹಶೀಲ್ದಾರ ಕಚೇರಿ ರಸ್ತೆ ಬಿಕೋ ಎನ್ನುತ್ತಿದೆ, ಇನ್ನೂ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಕಂಡು ಬಂದ್ರೇ, ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ವಾಹನ ಓಡಾಟ ಎಂದಿನಂತಿದೆ. ಇನ್ನೂ ಸಾರಿಗೆ ಬಸ್ ಆಗೊಂದು ಈಗೊಂದು ಆಗಮಿಸಿ ಪ್ರಯಾಣಿಕರಿಗೆ ಅನುಕೂಲವಾಗಿದ್ರೇ, ಜನ ಮಾಸ್ಕ್ ಮರೆತೊಗಿದ್ದಾರೆ.
Kshetra Samachara
15/01/2022 01:22 pm