ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ಆತ ಬಾಡಿಗೆಗೆ ಟ್ಯಾಕ್ಸಿ ಹಾಗೂ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಬಡ ಡ್ರೈವರ್. ಕ್ಲಚ್ ಬ್ರೇಕ್ ಒತ್ತುವ ಮೂಲಕ ಜೀವನಕ್ಕೆ ಆಧಾರವಾಗಿದ್ದ ಆ ಕಾಲುಗಳೇ ಈಗ ಇಲ್ಲವಾಗಿದೆ. ದುಡಿದು ತಿನ್ನಲು ಕಾಲುಗಳಿಲ್ಲ. ಬೇಡಿ ತಿನ್ನಲು ಕೂಡ ಸಾಧ್ಯವಾಗದೇ ಅನಾರೋಗ್ಯದ ಮಡುವಿನಲ್ಲಿ ಒದ್ದಾಡುತ್ತಿರುವ ಬಡ ಡ್ರೈವರ್ ಕಣ್ಣೀರ ಕಥೆ ಇಲ್ಲಿದೆ ನೋಡಿ.
ಹೀಗೆ ಕೈಗಳ ಆಸರೆಯಿಂದ ತೆವಳುತ್ತಾ ಬರುತ್ತಿರುವ ಈ ವ್ಯಕ್ತಿ ಹೆಸರು ವಿರೂಪಾಕ್ಷ ಬಸಪ್ಪ ಕಟಗಿ. ಮೂಲತಃ ಶಿರಸಿಯವರು, ಊರಲ್ಲಿ ಆಟೋ, ಟ್ಯಾಕ್ಸಿ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಇವರು ಎಂಟು ವರ್ಷಗಳಿಂದ ಗ್ಯಾಂಗ್ರೀನ್ ಗೆ ತುತ್ತಾಗಿ ತನ್ನ ಜೀವನಕ್ಕೆ ಆಧಾರವಾಗಿದ್ದ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆಮ
ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಈ ಬಡ ಡ್ರೈವರ್ ಗೆ ಈಗ ಲಿವರ್ ಇನ್ಪೆಕ್ಷನ್ ಆಗಿದ್ದು, ಖಾಸಗಿ ಆಸ್ಪತ್ರೆಯ ಮೊರೆ ಹೋಗಬೇಕಾಗಿದೆ. ಆದರೆ ಹಣದ ಅಡಚಣೆಯಿಂದ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇನ್ನೂ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಹಾಗೂ ಔಷಧೀಯ ಖರ್ಚು ಸೇರಿದಂತೆ ತಿಂಗಳಿಗೆ 18,000 ಬರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜೀವನ ಉಳಿಸಿಕೊಳ್ಳಲು ಈ ಬಡ ಜೀವ ಪರದಾಡುವಂತಾಗಿದೆ. ದಾನಿಗಳ ಸಹಾಯಕ್ಕೆ ಅಂಗಲಾಚುತ್ತಿದ್ದು, ಸಾವಿನ ದಾರಿ ಕಾಯುತ್ತಿದ್ದರೂ ಸಾವು ಬರುತ್ತಿಲ್ಲ. ಜೀವ ಉಳಿಸಿಕೊಳ್ಳಲು ಧನಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ. ಅಲ್ಲದೇ ಊರಿನವರು ಕೂಡ ಸ್ವಯಂ ಪ್ರೇರಣೆಯಿಂದ ಶಿರಸಿಯಿಂದ ಹುಬ್ಬಳ್ಳಿಗೆ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದು, ಸಹಾಯಕ್ಕೆ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಈ ಬಡ ಡ್ರೈವರ್ ಜೀವನಕ್ಕೆ ಸಹಾಯಹಸ್ತ ಬೇಕಿದೆ. ಸಹೃದಯಿ ದಾನಿಗಳು ಕೈಲಾದ ಮಟ್ಟಿಗೆ ಸಹಾಯ ಮಾಡಿ ಜೀವ ಉಳಿಯಲು ಸಹಾಯ ಮಾಡಬೇಕಿದೆ.
ವಿಳಾಸ:
ವಿರೂಪಾಕ್ಷ ಬಸಪ್ಪ ಕಟಗಿ
ಕೆನರಾ ಬ್ಯಾಂಕ್
ಅಕೌಂಟ್ ನಂಬರ- 03032250021930
Ifsc- CNRB0010303
PHONE- 7338211083
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/03/2022 06:14 pm