ಹುಬ್ಬಳ್ಳಿ: ಪ್ರತಿ ಹೆಣ್ಣುಮಕ್ಕಳ ಜೀವನದ ಮುಟ್ಟು ಒಂದು ಪ್ರಮುಖ ಘಟ್ಟ. ಮೊದಲ ಬಾರಿಗೆ ಮುಟ್ಟು ಕಾಣಿಸಿಕೊಂಡಾಗ ಹೆಣ್ಣುಮಕ್ಕಳು ಭಯಪಟ್ಟುಕೊಳ್ಳದೇ ಮನೆಯಲ್ಲಿ ತಾಯಿ ಜೊತೆ, ಶಾಲೆಯಲ್ಲಿ ಸ್ನೇಹಿತೆಯರ ಜೊತೆ, ಶಿಕ್ಷಕಿಯರ ಜೊತೆ ಹಂಚಿಕೊಳ್ಳಿ ಎಂದು ಸ್ತ್ರೀರೋಗ ತಜ್ಞೆ ಡಾ.ರಚನಾ ಘಂಟಿ ಹೇಳಿದರು.
ಇಲ್ಲಿನ ಲಾಮಿಂಗ್ಟನ್ ಪ್ರಾಥಮಿಕ ಶಾಲೆಯಲ್ಲಿ ಚಿಲ್ ಗ್ರೂಪ್ ವತಿಯಿಂದ ವಿದ್ಯಾರ್ಥಿನಿಯರಿಗೆ ಮುಟ್ಟಿನ ಅರಿವು, ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಿಂಗಳ ಮುಟ್ಟು ಕಾಣಿಸಿಕೊಂಡಾಗ ದೈಹಿಕವಾಗಿ ಸ್ವಚ್ಛತೆಗೆ ಮಹತ್ವ ನೀಡಬೇಕು. ಪೌಷ್ಟಿಕ ಆಹಾರ ತಿನ್ನಬೇಕು. ಮುಟ್ಟಿನ ವಿಚಾರದಲ್ಲಿರುವ ಮೌಢ್ಯದಿಂದ ಹೊರಬರಬೇಕು’ ಎಂದು ಅವರು ತಿಳಿವಳಿಕೆ ನೀಡಿದರು. ಮುಟ್ಟಿನ ಕುರಿತು ವಿದ್ಯಾರ್ಥಿನಿಯರಿಂದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಎಲ್ಲ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್, ಪುಸ್ತಕ ಹಾಗೂ ಚಾಕೊಲೆಟ್‌ಗಳನ್ನು ವಿತರಿಸಲಾಯಿತು. ಶಾಲೆಯ ಪ್ರಾಚಾರ್ಯೆ ಸೌಮ್ಯಾ ಪ್ರಭು, ಶಾಲೆ ಆಡಳಿತ ಮಂಡಳಿಯ ಸಹನಾ ಪೈಕೋಟಿ, ಚಿಲ್ ಗ್ರೂಪ್‌ನ ಸದಸ್ಯರಾದ ರಶ್ಮಿ ಎಸ್.ಎನ್, ಕೃಷ್ಣಿ ಶಿರೂರ, ಶಾಹಿನ್ ಮೊಕಾಶಿ, ಮೇಘನಾ ಆರ್.ಸಿ, ರಂಜಿತಾ ಕೆಲಗೇರಿ, ಕಾಜಲ್ ರಾವಲ್, ರೇಖಾ ಜೈನ್, ಸಯಾಲಿ ಕರಂಡಿಕರ್, ದಿವ್ಯಾ ಶೆಟ್ಟಿ,ಸಂಜೀವಿನಿ ಸವಣೂರ, ಸಹನಾ ಕುರ್ತಕೋಟಿ, ಸೌಮ್ಯಾ ತಿವಾರಿ, ಪ್ರದೀಪ ಶಾ ಇದ್ದರು.
Kshetra Samachara
23/02/2022 08:25 pm