ಹುಬ್ಬಳ್ಳಿ: ಕಿಲ್ಲರ್ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಸಿಕಾ ಅಭಿಯಾನ ಈಗ 15ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುತ್ತಿದ್ದು, ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಹುಬ್ಬಳ್ಳಿಯ ಕೇಶ್ವಾಪೂರದ ಫಾತಿಮಾ ಶಾಲೆಯಲ್ಲಿ 15 ರಿಂದ 18 ವರ್ಷರ್ದಳಗಿನ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನದ ಕಾರ್ಯಕ್ರಮ ವೀಕ್ಷಣೆ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜಗತ್ತು ಈಗ ಭಾರತವನ್ನು ನಿಬ್ಬೆರಗಾಗಿ ನೋಡುವಂತಾಗಿದೆ. ಎಲ್ಲ ರಾಷ್ಟ್ರಗಳಿಗಿಂತ ತಡವಾಗಿ ಭಾರತಕ್ಕೆ ವ್ಯಾಕ್ಸಿನ್ ಬಂದಿದ್ದರೂ ಎಲ್ಲ ದೇಶಕ್ಕಿಂತ ಹತ್ತರಷ್ಟು ನಾವು ಮುಂದಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Kshetra Samachara
18/01/2022 12:04 pm