ಹುಬ್ಬಳ್ಳಿ: ಜಗತ್ತನ್ನೇ ತಲ್ಲಣಗೊಳಿಸಿದ ಕಿಲ್ಲರ್ ಕೊರೋನಾ ಹಾವಳಿ ಮತ್ತೆ ಆತಂಕವನ್ನು ಹುಟ್ಟು ಹಾಕಿದೆ. ಇಷ್ಟು ದಿನ ಕೊರೋನಾ ಹಾವಳಿಯಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಈಗ ಮತ್ತೇ ಶಾಕ್ ನೀಡಿದಂತಾಗಿದೆ. ಶಾಲೆಯಿಲ್ಲದೇ ಮನೆಯಲ್ಲಿ ಇದ್ದ ಮಕ್ಕಳಿಗೆ ಈಗ ಕೊರೋನಾ ಹಾವಳಿ ಮತ್ತೇ ಮನೆಯಲ್ಲಿ ಇರುವಂತೆ ಮಾಡಿದೆ. ಹಾಗಿದ್ದರೇ ಇಲ್ಲಿ ಆಗಿದ್ದಾದರೂ ಏನು ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿಯುವ ಪರಿಸ್ಥಿತಿ ಬಂದಿದ್ದಾದರೂ ಯಾಕೆ ಅಂತೀರಾ ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್...
ಸತ್ತೂರಿನ ಬಡಾವಣೆಯಲ್ಲಿರುವ ಎಸ್.ಡಿ.ಎಂ ವೈದ್ಯಕೀಯ ಮೆಡಿಕಲ್ ಕಾಲೇಜಿನ 300ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಕಳೆದ 25ರಿಂದ ಮಹಾವಿದ್ಯಾಲಯ ಬಂದ್ ಮಾಡಿ ಎರಡು ವಸತಿ ನಿಲಯಗಳನ್ನು ಸೀಲ್ ಡೌನ್ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸವಿರುವ ಆದರ್ಶನಗರದ ರೋಟರಿ ಶಾಲೆಯ ವಿದ್ಯಾರ್ಥಿಯೋರ್ವನಿಗೆ ಕೊರೊನಾ ಖಚಿತ ಪಟ್ಟಿದೆ.
ಕಳೆದ ಎರಡು ಮೂರು ದಿನಗಳಿಂದ ರೋಟರಿ ಶಾಲೆಗೆ ಗೈರಾಗಿದ್ದ 9ನೇ ತರಗತಿಯ ವಿದ್ಯಾರ್ಥಿಗೆ ಇಂದು ಕೋವಿಡ್ ಖಚಿತ ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಪಾಲಕರು ಶಾಲೆಗೆ ಈ ವಿಷಯ ತಿಳಿಸಿದ ತಕ್ಷಣ ಆಡಳಿತ ಮಂಡಳಿ ಇಂದು ಎಲ್ಲ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿತಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ವಿಷಯ ತಿಳಿಸಿ ಮುಂದಿನ ಸೋಮವಾರದವರೆಗೆ ಎಲ್ಲ ತರಗತಿಗಳಿಗೂ ರಜೆ ಘೋಷಿಸಿದೆ. ಈಗ ಹುಬ್ಬಳ್ಳಿಯ ಬಹುತೇಕ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
ಲಾಕ್ ಡೌನ್ ಸಡಿಲಿಕೆಯಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಈಗ ಮತ್ತಷ್ಟು ಆತಂಕ ಬೇರು ಬಿಟ್ಟಿದೆ. ಈಗ ಮಕ್ಕಳನ್ನು ಶಾಲೆಗೆ ಕಳಿಸುವುದೋ ಬೇಡವೋ ಎಂಬುವಂತ ಸಮಸ್ಯೆ ಸುಳಿಯಲ್ಲಿ ಪಾಲಕರು ಸಿಲುಕಿಕೊಂಡಿದ್ದಾರೆ.
ಒಟ್ಟಿನಲ್ಲಿ ಬಿಟ್ಟೆನೆಂದರು ಬಿಡದು ಈ ಮಾಯೇ ಎಂಬುವಂತ ಮನುಕುಲಕ್ಕೆ ಬೆನ್ನು ಬಿಡದೇ ಕಾಡುತ್ತಿರುವ ಕೊರೋನಾ ಈಗ ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ ಈಗಾಗಲೇ ಫಸ್ಟ್ ಡೋಸ್ ಸೆಕೆಂಡ್ ಡೋಸ್ ವ್ಯಾಕ್ಸಿನ ಪಡೆದರು ಕೂಡ ಜನರು ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ.
Kshetra Samachara
02/12/2021 12:58 pm